ಇನ್ಮುಂದೆ ರಾತ್ರಿ 1 ಗಂಟೆವರೆಗೂ ಹೊಟೇಲ್ ಓಪನ್..!

ಶನಿವಾರ, 11 ಜೂನ್ 2022 (19:25 IST)
ಸಿಲಿಕಾನ್ ಸಿಟಿಗೆ ಉದ್ಯೋಗವನ್ನ ಹಾರಿಸಿ ಅಥವಾ ಬೇರೆ ಬೇರೆ ಕಾರಣಕ್ಕಾಗಿ ಜನರು ಬಂದಿರುತ್ತಾರೆ.  ಆದ್ರೆ ಬರುವ  ಅರ್ಧಕ್ಕೆ ಅರ್ಧದಷ್ಟು ಜನರು ಹೊಟೇಲ್ ಊಟವನ್ನ ಅವಲಂಬಿಸಿರುತ್ತಾರೆ.ನಗರದಲ್ಲಿ 10 ಗಂಟೆಗೆ ಹೊಟೇಲ್ ಕ್ಲೋಸ್ ಆಗುವುದರಿಂದ ಎಷ್ಟೋ ಬಾರಿ ಜನರು ಹಸುವಿನಿಂದ ಮಲಗುವಂತಾಗಿದೆ. ಆದ್ರೆ ಇನ್ಮುಂದೆ ಹಾಗೆ ಆಗದಂತೆ  ಗ್ರಾಹಕರ ಹಿತದೃಷ್ಟಿಯಿಂದ ಹೊಟೇಲ್ ಉದ್ಯಮ ಮಹತ್ವವಾದ ನಿರ್ಧಾರ ತೆಗೆದುಕೊಂಡಿದೆ.

ಕೋವಿಡ್ ನಿಂದ ಸುಮಾರು 2 ವರ್ಷ ಹೊಟೇಲ್ ಉದ್ಯಮ ತತ್ತರಿಸಿ ಹೋಗಿತ್ತು.ಆದ್ರೆ ಈಗ ಹಂತ ಹಂತವಾಗಿ ಹೊಟೇಲ್ ಉದ್ಯಮ ಚೇತರಿಕೆ ಕಂಡಿದೆ.ಅಷ್ಟೇ ಅಲ್ಲದೆ ಗ್ರಾಹಕರ ಹಿತದೃಷ್ಟಿಯಿಂದ ಹೊಟೇಲ್ ಉದ್ಯಮ ಹಲವು ಮಹತ್ವವಾದ ನಿರ್ಧಾರ ಕೈಗೊಂಡಿದೆ. ಗ್ರಾಹಕರ ಅನುಕೂಲಕ್ಕಾಗಿ ಮಧ್ಯರಾತ್ರಿ 1 ಗಂಟೆವರೆಗೂ ಹೊಟೇಲ್ ತೆರೆಯಲು ಅನುಮತಿ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ ಸರ್ವಿಸ್ ಬಿಲ್ ಕೂಡ ಗ್ರಾಹಕರ ಬಳಿ ಬಲವಂತಾಗಿ ತೆಗೆದುಕೊಳ್ಳುವುದಿಲ್ಲ ಅಂತಾ ನಿರ್ಧಾರ ತೆಗೆದುಕೊಂಡಿದ್ದಾರೆ.

ಇನ್ನು ಮಧ್ಯರಾತ್ರಿ 1 ರವರೆಗೆ ಹೊಟೇಲ್ ಓಪನ್ ಇರುವುದರಿಂದ ಎಷ್ಟೋ ಜಮರಿಗೆ ಅನುಕೂಲವಾಗುತ್ತೆ. ರಾತ್ರಿ 2 nd ಶಿಫ್ಟ್ ಕೆಲಸ ಮುಗಿಸಿ ಹೋಗುವವರಿಗೆ ರಾತ್ರಿ 12 ಗಂಟೆ ಅಥಾವ 1 ಗಂಟೆಯೂ ಆಗಬಹುದು. ಅಂತವರಿಗೆ ಹೊಟೇಲ್ ತೆರೆದಿರುವುದು ಉಪಯೋಗವಾಗುತ್ತೆ. ಜೊತೆಗೆ ಹೊಟೇಲ್ ಬ್ಯುಸಿನೆಸ್ ಕೂಡ ಚನ್ನಾಗಿ ನಡೆಯುತ್ತೆ. ಈಗಾಗಲೇ ಹೊಟೇಲ್ ಉದ್ಯಮದ ಚೇತರಿಕೆಯ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ ಎರಡರ ಹಿತದೃಷ್ಟಿಯಿಂದ ಹೊಟೇಲ್ ರಾತ್ರಿವರೆಗೂ ಒಫನ್ ಮಾಡುವಂತೆ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಕಮಿಷನರ್ ಪ್ರತಾಪ್ ರೆಡ್ಡಿಗೆ ಪತ್ರಕೊಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಅವರು ಹೊಟೇಲ್ ಓಪನ್ ಇರುವುದಕ್ಕೆ ಸಮ್ಮತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ