ಇಂದಿನಿಂದ 800 ಔಷಧಗಳ ದರ ಬಲು ದುಬಾರಿ,,!

ಶನಿವಾರ, 1 ಏಪ್ರಿಲ್ 2023 (18:31 IST)
ಬೆಲೆಯೇರಿಕೆಯಿಂದ ತತ್ತರಿಸಿಹೋಗಿದ್ದ ರಾಜ್ಯದ ಜನರಿಗೆ ಇಂದಿನಿಂದ ಮತ್ತೊಂದು ಶಾಕ್ ಎದುರಾಗಲಿದೆ.ನೋವು ನಿವಾರಕ, ಸೋಂಕು ನಿವಾರಕ ಸೇರಿದಂತೆ ಸುಮಾರು 800 ಅಗತ್ಯ ಔಷಧಿಗಳ ದರ ಹೆಚ್ಚಾಗಿದ್ದು, ಇತ್ತ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳಿಗೆ ಡಿಮ್ಯಾಂಡ್ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ.ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೆ ಇಂದಿನಿಂದ ಅಗತ್ಯ ಔಷಧಗಳ ದರ ಏರಿಕೆ ಬಿಸಿ ಜನರಿಗೆ ತಟ್ಟಲಿದೆ.ಜ್ವರ,ಚರ್ಮರೋಗ,ಹೃದ್ರೋಗ,ಸೇರಿದಂತೆ ಸುಮಾರು 800 ಔಷಧಗಳ ಬೆಲೆ ಹೆಚ್ಚಾಗಲಿದ್ದು,ರೋಗಿಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೈರಾಣಾಗಿದ ಜನ್ರಿಗೆ ಮತ್ತೊಂದು ಬರೆ ಎಳೆದಿದೆ ಕೇಂದ್ರ ಸರ್ಕಾರ, ವಿವಿದ ಬಗ್ಗೆಯ ರೋಗ ಗಳಿಂದ ಬಳಲುತ್ತಿರೋ ರೋಗಿಗಳಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ತಿದೆ,.ದಿನ ಬಳಕೆ ವಸ್ತುಗಳು ಬೆಲೆ ಏರಿಕೆ ಅಯ್ತು ..ಈಗ ಔಷಧಗಳ ಬೆಲೆ ಗಗನಕ್ಕೆ. ಏರಿದ್ದು ವಿವಿಧ ಔಷಧಿ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ ಸಾಮಾನ್ಯ ಬಳಕೆಯ ಔಷಧಿಗಳ ಬೆಲೆ ಶೇಕಡಾ 12 ರಷ್ಟು ಏರಿಕೆ ನಿರ್ಧರಿಸಲಾಗಿದ್ದು, ಜ್ವರ,ಕೆಮ್ಮು,ಸೇರಿದಂತೆ ಸಾಮಾನ್ಯ ಔಷಧಿಗಳ ದರ ದುಪ್ಪಟ್ಟಾಗಲಿದೆ.

ಅಗದ್ರೆ ಯಾವ,,ಯಾವ ಔಷದಿ ಬೆಲೆ ಏರಿಕೆ ಮಾಡ್ತಿದರೆ ಅಂತ ನೋಡೋದದ್ರೆ,,,
- ಅಜಿಥ್ರೋಮೈಸಿನ್
- ಹೈಡ್ರೋಕ್ಲೋರೈಡ್
- ಪ್ಯಾರಸಿಟಾಮಲ್
- ಫೆನಿಟೋಯಿನ್
-  ನೋವು ನಿವಾರಕ, ಬಯೋಟಿಕ್,..
- ಉರಿಯೂತ ನಿವಾರಕ ಔಷಧ,..
- ಹೃದ್ರೋಗ ಔಷಧ .
- ಆಂಟಿ  ಬಯೋಟೆಕ್ ಔಷಧಗಳು, 
- ಕಿವಿ ಮೂಗು ಹಾಗೂ ಗಂಟಲಿಗೆ ಸಂಬಂಧಿತ ಔಷಧ,.
- ಆ್ಯಂಟಿಸೆಪ್ಟಿಕ್, ಆ್ಯಂಟಿ ಫಂಗಲ್, ನೋವು ನಿವಾರಕ ಔಷಧಗಳು .

ಔಷಧಗಳ ದರ ಹೆಚ್ಚಳವಾದರೇ ಮಧ್ಯಮ ವರ್ಗದ ಜನರು ಜನೌಷಧ ಕೇಂದ್ರಗಳ ಕಡೆ ಮುಖ ಮಾಡುವ ಸಾಧ್ಯತೆ ಹೆಚ್ಚಾಗಿದ್ದು , ವೈದ್ಯರು ಕೂಡ ಜನೌಷಧ ಕೇಂದ್ರಗಳಲ್ಲಿ ಔಷಧಿ ಖರೀದಿಗೆ ಸಲಹೆ ನೀಡುತ್ತಿದ್ದಾರೆ.ರಾಷ್ಟ್ರೀಯ ಔಷಧಿ ನಿಯಂತ್ರಣ ಪ್ರಾಧಿಕಾರ ದಿಂದ ಒಟ್ಟು 800 ಔಷಧಗಳ ಬೆಲೆ ಏರಿಕೆ ಮಾಡಿ ಅದೇಶ ಮಾಡಲಾಗಿದ್ದು, ಬಡ ರೋಗಿಗಳಿಗೆ ಔಷದಿ ತಗೋಳೋದೆ ಒಂದು ದೊಡ್ಡ ಚಾಲೇಂಜ್ ಅಗಿದೆ.ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಬೇಸತ್ತಿದ್ದ ಜನರಿಗೆ,ಇದೀಗ ಔಷಧಗಳು ಕೂಡ ಜೇಬು ಸುಡಲು ಸಜ್ಜಾಗಿದೆ.ಸದ್ಯ ಜನರಲ್ ಮೆಡಿಸನ್ ಗಳ ಬೆಲೆಯೇರಿಕೆಯಿಂದ ಖಾಸಗಿ ಮೆಡಿಕಲ್ ಗಳ ಬದಲು ಪ್ರಧಾನಮಂತ್ರಿ ಜನೌಷಧ ಕೇಂದ್ರಗಳತ್ತ ಜನ ಮುಖ ಮಾಡುವ ಸಾಧ್ಯತೆಗಳಿದ್ದು, ಬೆಲೆಯೇರಿಕೆ ಮತ್ಯಾವ ಪರಿಣಾಮ ಬೀರುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ