ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ, ಆಗರ್ಭ ಶ್ರೀಮಂತ ಪ್ರಜ್ವಲ್ ರೇವಣ್ಣ ಈಗ ಏನಾಗಿದ್ದಾರೆ ಗೊತ್ತಾ?
ಪ್ರಜ್ವಲ್ ರೇವಣ್ಣಗೆ ಮನೆಗೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪಿತ್ತಿದ್ದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೀಗಾಗಿ ಅವರೀಗ ಅಪರಾಧಿ ಕೈದಿಯಾಗಿದ್ದಾರೆ. ಹೀಗಾಗಿ ಇತರೆ ಕೈದಿಗಳಂತೆ ಅವರೂ ಜೈಲರ್ ಗಳು ಹೇಳಿದ ಕೆಲಸ ಮಾಡಬೇಕಾಗುತ್ತದೆ.
ಪ್ರಜ್ವಲ್ ರೇವಣ್ಣ ಪದವೀಧರ. ಹೀಗಾಗಿ ಅವರ ವಿದ್ಯಾರ್ಹತೆಗೆ ತಕ್ಕಂತೆ ಅವರಿಗೆ ಜೈಲಿನ ಲೈಬ್ರರಿ ಕ್ಲರ್ಕ್ ಕೆಲಸ ನೀಡಲಾಗಿದೆಯಂತೆ. ಇದಕ್ಕೆ ಅವರಿಗೆ 522 ರೂ ಸಂಬಳ ನೀಡಲಾಗುತ್ತದೆ. ಜೈಲಿನ ಪುಸ್ತಕಗಳನ್ನು ನೋಡಿಕೊಳ್ಳುವುದು, ನೋಂದಣಿ ಮಾಡಿಕೊಳ್ಳುವುದು ಇತ್ಯಾದಿ ಅವರ ಕೆಲಸವಾಗಿದೆ.
ಜನಪ್ರತಿನಿಧಿನಾಯಿ, ಪ್ರತಿಷ್ಠಿತ ಮನೆತನದ ಮಗನಾಗಿ ಆಳು ಕಾಳುಗಳನ್ನಿಟ್ಟುಕೊಂಡು ಮೆರೆಯುತ್ತಿದ್ದ ಪ್ರಜ್ವಲ್ ಇಂದು ಜೈಲಿನಲ್ಲಿ ಕ್ಲರ್ಕ್ ಆಗಿದ್ದಾರೆ. ಜೈಲಿನ ನಿಯಮದ ಪ್ರಕಾರವೇ ಅವರು ನಡೆದುಕೊಳ್ಳಬೇಕಾಗಿದೆ.