ಮೋದಿ ಅಮಿತ್ ಶಾ ರಾಜ್ಯಕ್ಕೆ ಬರ್ತಾರೆ ಅಂದ್ರೆ ಕಾಂಗ್ರೆಸ್ ನವರಿಗೆ ಭಯ ಶುರುವಾಗುತ್ತೆ- ಆರ್ ಅಶೋಕ್

ಭಾನುವಾರ, 11 ಡಿಸೆಂಬರ್ 2022 (13:35 IST)
ಹತ್ತು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರ್ತಾರೆ.ಶೀಘ್ರದಲ್ಲೇ ಅವರನ್ನ‌ ಬಿಜೆಪಿ ಅಭೂತಪೂರ್ವವಾಗಿ ಬರಮಾಡಿಕೊಳಲಿದೆ ಎಂದು ಆರ್ ಅಶೋಕ್ ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ.
 
ಕಾಂಗ್ರೇಸ್‌ಗೆ ಅವರ ಪಕ್ಷದ ಶಾಸಕರನ್ನೇ ಉಳಿಸಿಕೊಳ್ಳಲು ಆಗುತ್ತಿಲ್ಲ.ತಾಕತ್ತಿದ್ದರೆ ಅವರ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಬೇಕಿತ್ತು.ಸದ್ಯದಲ್ಲೇ ಶಾಸಕರನ್ನು ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ.ಈಗಾಗಲೇ ಕಾಂಗ್ರೆಸ್ ಪಕ್ಷದವರಿಗೆ ಭಯ ಶುರುವಾಗಿದೆ.ಎಲ್ಲಾ ಕಡೆ ಎಎಪಿ ಅವರ ಪಕ್ಷವನ್ನು ಗುಡಿಸಿ ಹಾಕ್ತಿದೆ.ಆಮ್ ಆದ್ಮಿ ಪಕ್ಷ  ಕಾಂಗ್ರೆಸ್ ಮತವನ್ನು ಕಬಳಿಸುತ್ತಿದೆ.ಮೋದಿ ಅಮಿತ್ ಶಾ ರಾಜ್ಯಕ್ಕೆ ಬರ್ತಾರೆ ಅಂದ್ರೆ ಕಾಂಗ್ರೆಸ್ ನವರಿಗೆ  ಭಯ ಶುರುವಾಗುತ್ತೆ.
 
ವಿಧಾನಸೌಧದ ಮುಂದೆ ಇಷ್ಟು ವರ್ಷ ಇದ್ರು ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡಲು ಆಗಿಲ್ಲ.ಎಚ್ ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ಮೂರ್ತಿ ಸ್ಥಾಪನೆಗೆ ಮುಂದಾಗಿಲ್ಲ.ಅವರು ಕಡೆಯಿಂದ ಸಾಧ್ಯವಾಗದ ಕೆಲಸವನ್ನು ಬಿಜೆಪಿ ಮಾಡುತ್ತಿದೆ.ವಿಧಾನಸೌಧದ ಮುಂದೆ ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.ಬಿಜೆಪಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡುವುದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ.ಬೊಮ್ಮನಹಳ್ಳಿಯ ಹೊಸ ಪಾಳ್ಯದಲ್ಲಿ ಸಚಿವ ಆರ್ ಅಶೋಕ್ ಹೇಳಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ