Ugadi Festival: ಯುಗಾದಿ ಹಬ್ಬಕ್ಕೆ ಎಲ್ಲದಕ್ಕೂ ರೇಟು, ಹೂವು, ಹಣ್ಣು ಬೆಲೆ ಕೇಳೋ ಹಾಗೇ ಇಲ್ಲ
ಹೂ, ಹಣ್ಣು ಖರೀದಿಗೆ ಜನ ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಹೂವಿನ ಬೆಲೆ ಸಾಮಾನ್ಯ ದಿನಕ್ಕಿಂತ ದುಪ್ಪಟ್ಟಾಗಿದೆ. ಗುಲಾಬಿ, ಸೇವಂತಿಗೆ ಕಾಲು ಕೆ.ಜಿ.ಗೆ 35-40 ರೂ.ಗೆ ಖರೀದಿ ಮಾಡುತ್ತಿದ್ದ ಜನ ಈಗ 50-70 ರೂ. ನೀಡಬೇಕಾಗಿದೆ.
600 ರೂ.ಗಳಿದ್ದ ಮಲ್ಲಿಗೆ 1200 ರೂ.ಗೆ ಬಂದು ತಲುಪಿದೆ. ಕನಕಾಂಬರಕ್ಕೂ ಹೆಚ್ಚು ಕಡಿಮೆ ಇಷ್ಟೇ ಬೆಲೆಯಿದೆ. ಹಣ್ಣುಗಳ ಬೆಲೆಯೂ ಸಾಮಾನ್ಯ ದಿನಕ್ಕಿಂತ 20-40 ರೂ.ವರೆಗೆ ಏರಿಕೆಯಾಗಿದೆ. 200 ರೂ. ಇದ್ದ ಸೇಬಿನ ಬೆಲೆ 240 ರೂ. ಆಗಿದ್ದರೆ ದಾಳಿಂಬೆ 150 ರೂ ಇದ್ದಿದ್ದು 250 ಕ್ಕೆ ತಲುಪಿದೆ. ಇನ್ನು, ಮಾವಿನ ಹಣ್ಣಿನ ಬೆಲೆಯೂ 300 ರ ಗಡಿಯಲ್ಲಿದೆ.