ವಿಧಾನಸಭಾಧ್ಯಕ್ಷನಾದ ನನಗೆ ಆದೇಶ ನೀಡಲು ನ್ಯಾಯಾಲಯಗಳಿಗೆ ಆದೇಶವಿಲ್ಲ. ಕಾನೂನು ಹಾಗೂ ನಿಯಮಗಳ ಪ್ರಕಾರವೇ ನಿರ್ಧಾರವನ್ನು ಕೈಗೊಳ್ಳಬೇಕಿದೆ. ಹೀಗಂತ ಸುಪ್ರೀಂಕೋರ್ಟ್ ಮೆಟ್ಟಿಲನ್ನೇರಿದ್ದಾರೆ ಸ್ಪೀಕರ್.
ಅತೃಪ್ತ ಶಾಸಕರು ನೀಡಿರೋ ರಾಜೀನಾಮೆ ಕುರಿತು ಸಂಜೆ 6 ಗಂಟೆಯ ಒಳಗೆ ತೀರ್ಮಾನ ಮಾಡೋಕೆ ಸಾಧ್ಯವೇ ಇಲ್ಲ. ಹೀಗಂತ ಸ್ಪೀಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಮೂಲಕ ಅತೃಪ್ತ ಶಾಸಕರ ಎದೆ ಮತ್ತಷ್ಟು ಡವಡವ ಎನ್ನುವಂತೆ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಶಾಸಕರ ರಾಜೀನಾಮೆ ಅಂಗೀಕಾರದ ಬಗ್ಗೆ ಇಂದು ಸಂಜೆ 6 ಗಂಟೆಯ ಒಳಗಡೆ ನಿರ್ಧಾರ ಕೈಗೊಂಡು ಶುಕ್ರವಾರ ತಿಳಿಸಬೇಕೆಂದು ಸ್ಪೀಕರ್ ಗೆ ಆದೇಶವನ್ನು ನೀಡಿತ್ತು.
ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಸ್ಪೀಕರ್, ಸುಪ್ರೀಂ ಕೋರ್ಟ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆ ಶುಕ್ರವಾರ ನಡೆಸುವ ಇಂಗಿತ ವ್ಯಕ್ತಪಡಿಸಿದೆ.