ಕಾಂಗ್ರೆಸ್ ಹಾಗೂ ಜೆಡಿಎಸ್ ನ ಶಾಸಕರು ನೀಡಿರುವ ರಾಜೀನಾಮೆ ವಿಷಯವಾಗಿ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಹೇಳಿರೋ ಹಿನ್ನೆಲೆಯಲ್ಲಿ ಒಂದೆಡೆ ಸ್ಪೀಕರ್ ಗೆ ಮತ್ತೊಂದೆಡೆ ಅತೃಪ್ತ ಶಾಸಕರಿಗೆ 50-50 ಹಿನ್ನಡೆಯಾದಂತಾಗಿದ್ದು, ಕ್ಲೈಮಾಕ್ಸ್ ಕುತೂಹಲ ಮೂಡಿಸಿದೆ.
ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರೋ ಸುಪ್ರೀಂಕೋರ್ಟ್ ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗುವಂತೆ ಹಾಗೂ ಕ್ರಮ ಬದ್ಧವಾಗಿ ಮತ್ತೊಮ್ಮೆ ಶಾಸಕರು ರಾಜೀನಾಮೆ ಸಲ್ಲಿಸಬಹುದು ಎಂದಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಅವರ ನೇತೃತ್ವದ ಪೀಠದ ಸೂಚನೆಯಿಂದಾಗಿ ಸ್ಪೀಕರ್ ತಮ್ಮ ನಿರ್ಧಾರವನ್ನು ಸಂಜೆಯೊಳಗೆ ತಿಳಿಸಲೇಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ.
ಇಂದೇ ಸುಪ್ರೀಂಕೋರ್ಟ್ ನಲ್ಲಿ ತಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂದುಕೊಂಡಿದ್ದ ಅತೃಪ್ತ ಶಾಸಕರಿಗೆ ನಾಳೆಗೆ ವಿಚಾರಣೆ