ಗದಗನಲ್ಲಿ ಸಿಎಂ- ಅನಂತಕುಮಾರ ಪರಸ್ಪರ ವಾಗ್ದಾಳಿ

ಬುಧವಾರ, 2 ಮೇ 2018 (13:38 IST)
ಗದಗ ಜಿಲ್ಲೆನಲ್ಲಿ ಒಂದಡೆ ಮುಖ್ಯಮಂತ್ರಿ ಪ್ರಚಾರ ಮತ್ತೊಂದಡೆ ಕೇಂದ್ರ ಬಿಜೆಪಿ ಮಂತ್ರಿಗಳ ಪ್ರಚಾರದ ಅಬ್ಬರ ಜೋರಾಗಿತ್ತು. ಸಿಎಂ ಬಿರು ಬಿಸಿಲಿನಲ್ಲಿ ನರಗುಂದ ಮತ್ತು ರೋಣ ಮತಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ರು.
 ಇತ್ತ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ ಗದಗ ಮತಕ್ಷೇತ್ರದ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ರೋಡ್ ಶೋ ನಡೆಸಿದ್ರು. ಒಬ್ಬರ ಮೆಲೊಬ್ಬರು ತೀವೃ ವಾಗ್ದಾಳಿ ನಡೆಸಿದ್ರು. 
 
 ಸೊರಟೂರು ಹಾಗೂ ಮುಳಗುಂದ ಗ್ರಾಮದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ತೋರಿಸಿದ್ರು. ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ, ಪ್ರಹ್ಲಾದ್ ಜೋಷಿ, ಎಸ್.ವಿ ಸಂಕನೂರ ಒಟ್ಟಾಗಿ ಗದಗ ಮತ ಕ್ಷೇತ್ರದ ಅನೀಲ್ ಮೆಣಸಿನಕಾಯಿ ಪರ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. 
 
ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಸಿಎಂ ಅವರು ಹತಾಶರಾಗಿ ಮೋದಿ ಬಗ್ಗೆ ಏನೇನೋ ಮಾತಾಡ್ತಾರೆ. ಇನ್ನೂ ಅಮಿತ್ ಶಾ ಮತ್ತು ಎಚ್.ಡಿ.ಕೆ ಒಂದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆಂದು ಆರೋಪಿಸುತ್ತಿರುವ ಸಿಎಂ ಸಿದ್ದರಾಮಯ್ಯ ಸಾಕ್ಷಿ ಸಮೇತ ಬಹಿರಂಗಪಡಿಸಲಿ. ಇಲ್ಲವಾದರೆ ಚುನಾವಣಾ ಕಣದಿಂದ ಹಿಂದೆ ಸರಿದು ರಾಜಕೀಯ ನಿವೃತ್ತಿ ಹೊಂದಬೇಕು ಎಂದು ಅನಂತಕುಮಾರ ಸವಾಲೆಸೆದರು.
 
 
ಸಿಎಂ ಪ್ರಚಾರ: 
ನರಗುಂದ ಮತ್ತು ರೋಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಸಿ.ಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಿದ್ರು. ನರಗುಂದ ಕ್ಕೆ ಆಗಮಿಸಿದ ಸಿ.ಎಂ ಸಿದ್ದರಾಮಯ್ಯ ಕಾಂಗ್ರಸ್‌ಗೆ ಮತ ಹಾಕಿ. ಬಿಜೆಪಿ ಕೈಬಿಡಿ. ನರಗುಂದ ಹಾಲಿ ಶಾಸಕ ಯಾವಗಲ್ ನಾನು ರೈತ ಸಂಘಟನೆಯಲ್ಲಿ ಇದ್ದವರು. ಅವರು ನನಗಿಂತ ಸೀನಿಯರ್. ಒಂದೇ ಬಾರಿ ಶಾಸಕರಾಗಿ ವಿಧಾನ ಸಭೆ ಪ್ರವೇಶಿಸಿದ್ವಿ. ಎಲ್ಲಾ ಜನರನ್ನು ಪ್ರೀತಿಸೋ ರಾಜಕಾರಣಿ ಯಾವಗಲ್ ಅವ್ರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದ್ರು. ಇನ್ನೂ ಯಥಾ ಪ್ರಕಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಬಿಜೆಪಿಯವರು ಸಾಲ ಮನ್ನಾ ಮಾಡ್ಲಿಲ್ಲ. ಮಹದಾಯಿ ಬಿಕ್ಕಟ್ಟನ್ನು ಇತ್ಯರ್ಥ ಮಾಡ್ಲುಲ್ಲ. ಕನ್ನಡ ವಿರೋಧಿ ಪ್ರಧಾನಿ ಎಂದರಲ್ಲದೆ ಕಾಂಗ್ರೆಸ್ ಕೆ ಮತ್ತೊಮ್ಮೆ ಆಶಿರ್ವಾದ ಮಾಡಿ ಎಂದ್ರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ