ತಮ್ಮ ಮೇಲೆ ಎಷ್ಟೇ ಹಿಂಸೆ ನಡೆದರೂ ಬೇರೆಯವರಿಗೆ ಹಿಂಸಾತ್ಮಕವಾಗಿ ಪ್ರತಿಕ್ರಿಯೆ ತೋರದೆ ಅಹಿಂಸಾ ಮನೋಭಾವವನ್ನು ಗಾಂಧೀಜಿ ಪಾಲಿಸಿದ್ದರು. ಮಹಾತ್ಮ ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟಕ್ಕೆ ಬ್ರಿಟಿಷರು ಬೆದರಿದರು. ಲಾಠಿಯೇಟು ತಿಂದರೂ, ಬೂಟ್‍ನಿಂದ ಹೊಡೆದರೂ ಗಾಂಧೀಜಿ ಅಹಿಂಸಾ ತತ್ವವನ್ನು ಬಿಡಲಿಲ್ಲ ಎಂದು ವಿವರಿಸಿದರು.
ಸ್ವದೇಶಿ ಜೀವನಶೈಲಿ, ಸ್ವದೇಶಿ ಉತ್ಪನ್ನಗಳ ಬಳಕೆ ಮಾಡಲು ಗಾಂಧೀಜಿ ಹೇಳಿದ್ದರು. ಅದೇ ವಿಚಾರಗಳನ್ನು ಮಾರ್ಗದರ್ಶಕವಾಗಿ ಇಟ್ಟುಕೊಂಡು ವಿಶ್ವವಂದ್ಯ ನಾಯಕರಾದ ಹಾಗೂ ನಮ್ಮ ಪ್ರಧಾನಿಗಳಾದ ನರೇಂದ್ರ ಮೋದಿ ಮುನ್ನಡೆಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪಕ್ಷದ ರಾಜ್ಯ ಆಯ್ಕೆ ನಿರ್ಮಲ್ ಕುಮಾರ್ ಸುರಾಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಶಾಸಕ ಪಿ. ರಾಜೀವ್ ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಮತ್ತು ಪಕ್ಷದ ನಾಯಕರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.