ಬೆಳ್ಳುಳ್ಳಿ ದರ ಕುಸಿದ ಹಿನ್ನಲೆ; ಆಕ್ರೋಶಗೊಂಡ ರೈತರು ಮಾಡಿದ್ದೇನು ಗೊತ್ತಾ?

ಭಾನುವಾರ, 1 ಮಾರ್ಚ್ 2020 (12:24 IST)
ಹಾವೇರಿ : ಬೆಳ್ಳುಳ್ಳಿ ದರ ಕುಸಿದ ಹಿನ್ನಲೆಯಲ್ಲಿ ಮಾರುಕಟ್ಟೆಯ ರಸ್ತೆಯ ಮಧ್ಯೆ ಬೆಳ್ಳುಳ್ಳಿ ಸುರಿದು ರೈತರು ಪ್ರತಿಭಟನೆ ನಡೆಸಿದ ಘಟನೆ ರಾಣಿಬೆನ್ನೂರಿನ ಎಪಿಎಂಸಿಯಲ್ಲಿ ನಡೆದಿದೆ.

ಕಳೆದ ವಾರ ಕ್ವಿಂಟಾಲ್ ಗೆ 12,000ರೂ ಇದ್ದ ಬೆಳ್ಳುಳ್ಳಿ ದರ ಇಂದು ಕ್ವಿಂಟಾಲ್ ಗೆ 2,000ರೂ  ಗೆ ಕುಸಿದಿದೆ. ಇದರಿಂದ ಆಕ್ರೋಶಗೊಂಡ ರೈತರು ಮಾರಾಟ ಮಾಡಲು ತಂದ ಬೆಳ್ಳುಳ್ಳಿಯನ್ನು ರಸ್ತೆ ಮಧ್ಯದಲ್ಲಿ ಸುರಿದು ಪ್ರತಿಭಟನೆ ನಡೆಸಿದ್ದಾರೆ.

 

ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ರೈತರು ರಸ್ತೆ ಸಂಚಾರಕ್ಕೆ ತಡೆಹಿಡಿದಿದ್ದು,  ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ರಾಣಿಬೆನ್ನೂರು ನಗರ ಠಾಣೆ ಪೊಲೀಸರು ರೈತರ ಜೊತೆ ಮಾತುಕತೆ ನಡೆಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ