ಸಕಲ ಸರ್ಕಾರಿ ಗೌರವಗಳೊಂದಿಗೆ ಗೌರಿ ಲಂಕೇಶ್ ಅಂತ್ಯಕ್ರಿಯೆ
ಗೌರಿ ಲಂಕೇಶ್ ಆಶಯದಂತೆ ಯಾವುದೇ ಧಾರ್ಮಿಕ ವಿಧಿ ವಿಧಾನಗಳನ್ನ ಅಂತ್ಯ ಸಂಸ್ಕಾರದ ವೇಳೆ ನೆರವೇರಿಸಲಿಲ್ಲ. ಹೂಗುಚ್ಛವಿರಿಸಿ ಅಂತ್ಯಸಂಸ್ಕಾರ ನೆರವೇರಿಸಿದರು. ತಂದೆ ಪಿ. ಲಂಕೇಶ್ ಅಂತ್ಯಸಂಸ್ಕಾರದ ವೇಳೆಯೂ ಧಾರ್ಮಿಕ ವಿಧಿ ವಿಧಾನ ನೆರವೇರಿಸಲು ಗೌರಿ ಲಂಕೇಶ್ ವಿರೋಧ ವ್ಯಕ್ತಪಡಿಸಿದ್ದರು.