ಗೌರಿ ಲಂಕೇಶ್ ಹತ್ಯೆಗೆ ಸಚಿವೆ ಸ್ಮೃತಿ ಇರಾನಿ ಖಂಡನೆ

ಬುಧವಾರ, 6 ಸೆಪ್ಟಂಬರ್ 2017 (15:15 IST)
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತೀವ್ರ ಖಂಡನೀಯ ಎಂದು ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಹೇಳಿಕೆ ನೀಡಿದ್ದು, ಹತ್ಯೆ ಕುರಿತಂತೆ ತ್ವರಿತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಲಂಕೇಶ್ ಪತ್ರಿಕೆಯ ಸಂಪಾದಕಿ, ಪತ್ರಿಕಾ ಅಂಕಣಕಾರ್ತಿಯಾಗಿದ್ದ ಗೌರಿ ಲಂಕೇಶ್, ಅವರನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ಗುಂಡುಹಾರಿಸಿ ಹತ್ಯೆಗೈದಿದ್ದರು. 
 
ಮೂಲಗಳ ಪ್ರಕಾರ, ಗೌರಿ ಲಂಕೇಶ್ ತಮ್ಮ ಕೆಲಸವನ್ನು 7.30 ಗಂಟೆಗೆ ಮುಗಿಸಿಕೊಂಡು ಮರಳುತ್ತಿರುವಾಗ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು , ಗೌರಿ ಮನೆಯ ಆವರಣನ್ನು ಪ್ರವೇಶಿಸುತ್ತಿದ್ದಂತೆ ಏಳು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ.
 
ಗೌರಿ ಲಂಕೇಶ್ ಮೇಲೆ ಏಳು ಗುಂಡುಗಳನ್ನು ಫೈರ್ ಮಾಡಲಾಗಿದ್ದು ಅದರಲ್ಲಿ ಮೂರು ಗುಂಡುಗಳು ಅವರ ದೇಹವನ್ನು ಹೊಕ್ಕಿವೆ. ಎರಡು ಗುಂಡುಗಳು ದೇಹವನ್ನು ಹೊಕ್ಕಿದ್ದರೆ ಒಂದು ಗುಂಡು ಹಣೆಗೆ ತಗುಲಿದೆ ಎಂದು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ