ಗೌರಿ ಲಂಕೇಶ್ ಹತ್ಯೆ ತನಿಖೆ ಎಲ್ಲೀವರೆಗೆ ಬಂತು?

ಶನಿವಾರ, 9 ಸೆಪ್ಟಂಬರ್ 2017 (10:23 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಗತಿ ಬಗ್ಗೆ ವಿಚಾರ ವಿಮರ್ಶೆ ನಡೆಸಲು ಇಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ನಡೆಯಲಿದೆ.


ಮೊನ್ನೆಯಷ್ಟೇ ದುಷ್ಕರ್ಮಿಗಳ ಗುಂಡಿಗೆ ಗೌರಿ ಲಂಕೇಶ್ ತಮ್ಮ ನಿವಾಸದ ಮುಂದೆಯೇ ಬರ್ಬರವಾಗಿ ಹತ್ಯೆಯಾಗಿದ್ದರು. ಇದಾದ ಬಳಿಕ ಹಂತಕರ ಪತ್ತೆಗೆ ಸರ್ಕಾರ ಎಸ್ ಐಟಿ ತಂಡ ರಚನೆ ಮಾಡಿತ್ತು. ಎಸ್ಐಟಿ ತಂಡ ಈಗಾಗಲೇ ವಿಚಾರಣೆ ಆರಂಭಿಸಿದೆ.

ಈ ತನಿಖೆಯ ಪ್ರಗತಿ ಬಗ್ಗೆ ಚರ್ಚಿಸಲು ಇಂದು ಗೃಹ ಸಚಿವರು 11 ಗಂಟೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ಕರೆದಿದ್ದಾರೆ.  ಸಭೆಗೆ ಡಿಜಿಪಿ ರೂಪ್ ಕುಮಾರ್ ದತ್ತಾ, ಎಸ್ಐಟಿ ಮುಖ್ಯಸ್ಥ ಬಿಕೆ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಲಿದ್ದಾರೆ.

ಇದನ್ನೂ ಓದಿ.. ಕೊಹ್ಲಿ ಇನ್ನೂ ಹತ್ತು ವರ್ಷ ಆಡೋದು ಗ್ಯಾರಂಟಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ