ಗೌರಿ ಲಂಕೇಶ್ ಹತ್ಯೆ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಶಾಸಕ ಜೀವರಾಜ್ ವಿಚಾರಣೆ: ರಾಮಲಿಂಗಾರೆಡ್ಡಿ’
ಶುಕ್ರವಾರ, 8 ಸೆಪ್ಟಂಬರ್ 2017 (12:25 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಶಾಸಕ ಜೀವರಾಜ್ ಅವರನ್ನ ತನಿಖೆಗೊಳಪಡಿಸಲು ಸೂಚಿಸಿರುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಬೈಕ್ ರ್ಯಾಲಿ ಸಂದರ್ಭ ಮಾತನಾಡಿದ್ದ ಶಾಸಕ ಜೀವರಾಜ್, ಸಂಘ ಪರಿವಾರದವರ ವಿರುದ್ಧ ಬರೆದಿದ್ದೇ ಕಾರಣ ಎಂಬ ಅರ್ಥ ಬರುವ ರೀತಿ ಮಾತನಾಡಿದ್ದರು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿ ದೂರು ಕೂಡ ದಾಖಲಾಗಿತ್ತು. ಇದೀಗ, ಈ ಬಗ್ಗೆ ವಿಚಾರಣೆಗೊಳಪಡಿಸಲು ಸೂಚಿಸಿರುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸಿಎಂ ಜೊತೆಗಿನ ಸಭೆ ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ, ಶಾಸಕ ಜೀವರಾಜ್ ಹೇಳಿಕೆ ವಿಚಾರಣೆ ನಡೆಸಲು ಸೂಚಿಸಿದ್ದೇವೆ. ಯಾಕೆ ಆ ರೀತಿ ಹೇಳಿಕೆ ನೀಡಿದ್ದೀರಿ ಎಂದು ಕೇಳಲು ಸೂಚಿಸಿದ್ದೇವೆ. ಬಹಿರಂಗವಾಗಿ ಅಂತಹ ಹೇಳಿಕೆ ನೀಡುವುದು ಸರಿಯಲ್ಲ. ಎಸ್ಐಟಿ ತನಿಖೆ ಬಳಿಕ ಹೇಳಿಕೆ ಬಗ್ಗೆ ಬಗ್ಗೆ ಮತ್ತಷ್ಟು ಸ್ಪಷ್ಟನೆ ಸಿಗುತ್ತೆ ಎಂದು ಅವರು ಹೇಳಿದ್ದಾರೆ.
ಇದೇವೇಳೆ, ಹಂತಕರ ಬಗ್ಗೆ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ರಾಮಲಿಂಗಾರೆಡ್ಡಿ ಘೋಷಿಸಿದ್ದಾರೆ. ಎಸ್`ಐಟಿ ಕೇಳಿದಷ್ಟು ಪೊಲೀಸ್ ಸಿಬ್ಬಂದಿ ನೀಡಿದ್ದೇವೆ .ಮತ್ತಷ್ಟು ಸಿಬ್ಬಂದಿ ನೀಡಲು ಸಿದ್ಧವಿರುವುದಾಗ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ