ವಾದ್ರಾ ವಿರುದ್ಧ ಚಾರ್ಜ್‌ಶೀಟ್‌, ವಾದ್ರಾ, ಗಾಂಧಿ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ: ಮಲ್ಲಿಕಾರ್ಜುನ ಖರ್ಗೆ

Sampriya

ಶನಿವಾರ, 19 ಜುಲೈ 2025 (16:29 IST)
ಬೆಂಗಳೂರು: ರಾಬರ್ಟ್ ವಾದ್ರಾ ವಿರುದ್ಧದ ಇಡಿ ಚಾರ್ಜ್ ಶೀಟ್ ಸಲ್ಲಿಸಿರುವುದು ಅವರಿಗೆ ಮತ್ತು ಗಾಂಧಿ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಮತ್ತು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸುವ ಪ್ರಯತ್ನ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಜುಲೈ 17 ರಂದು, ಜಾರಿ ನಿರ್ದೇಶನಾಲಯವು (ED) ಕಾಂಗ್ರೆಸ್ ಸಂಸದ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಹರಿಯಾಣದ ಶಿಕೋಹ್‌ಪುರದಲ್ಲಿ ಭೂ ವ್ಯವಹಾರದಲ್ಲಿ ಅಕ್ರಮಗಳಿಗೆ ಸಂಬಂಧಿಸಿದ ಆರೋಪ ಪಟ್ಟಿಯನ್ನು ಸಲ್ಲಿಸಿತು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಪಕ್ಷವನ್ನು ಟಾರ್ಗೆಟ್ ಮಾಡಿ, ಇದೀಗ ವಾದ್ರಾ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ.  ಇದು ವಾದ್ರಾ ಮತ್ತು ಗಾಂಧಿ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಯತ್ನದ ಭಾಗವಾಗಿದೆ. ಆದರೆ ಎಂದಿಗೂ ಕೇಂದ್ರದ ಬಿಜೆಪಿ ಯಶಸ್ವಿಯಾಗುವುದಿಲ್ಲ ಎಂದರು. 

‘ಲ್ಯಾಂಡ್ ಜಿಹಾದ್’ಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖ್ಯಸ್ಥರು, “ಲ್ಯಾಂಡ್ ಜಿಹಾದ್ ಎಂದರೇನು ಎಂದು ನನಗೆ ತಿಳಿದಿಲ್ಲ, ಅವರು ನನ್ನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಬಯಸಿದರೆ, ಸ್ವಾಗತಿಸಿ, ಅವರು ತೆಗೆದುಕೊಳ್ಳಲಿ, ಅವರು ಕ್ರಮ ಕೈಗೊಂಡಾಗ, ನಾನು ಪ್ರತಿಕ್ರಿಯಿಸುತ್ತೇನೆ” ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ