ನವದೆಹಲಿ: ಒಂದನೇ ಹಂತದ ಲಾಕ್ ಡೌನ್ ಮುಕ್ತಾಯಗೊಳ್ಳುತ್ತಿದ್ದು, ದೇಶ ಎರಡನೇ ಹಂತದ ಲಾಕ್ ಡೌನ್ ಗೆ ಸಿದ್ಧವಾಗುತ್ತಿದೆ. ಈ ನಡುವೆ ಕೆಲವು ಅಗತ್ಯ ಕೈಗಾರಿಕಾ ಸ್ಥಾಪನೆಗಳ ಪುನರಾರಂಭಕ್ಕೆ ಕೇಂದ್ರ ಚಿಂತನೆ ನಡೆಸಿದೆ ಎನ್ನಲಾಗಿದೆ.
ದೇಶದ ಆರ್ಥಿಕತೆ ಮೇಲೆ ಲಾಕ್ ಡೌನ್ ಭಾರೀ ಹೊಡೆತ ನೀಡುತ್ತಿದೆ. ಜತೆಗೆ ಬಡ ವರ್ಗದವರ, ದಿನಗೂಲಿ ನೌಕರರಿಗೆ ಆದಾಯವಿಲ್ಲದೇ ಹೋಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ಕೆಲವು ಅಗತ್ಯ ಕೈಗಾರಿಕಾ ಸ್ಥಾಪನೆಗಳನ್ನು ಪುನರಾರಂಭಿಸಲು ಯೋಜನೆ ರೂಪಿಸುವಂತೆ ಪ್ರಧಾನಿ ಮೋದಿ ಸಚಿವರುಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಶೇ. 50 ರಷ್ಟು ಕಾರ್ಮಿಕರನ್ನು ಹಾಜರಿರುವಂತೆ ಹೇಳಿ ಕೆಲವು ಕೈಗಾರಿಕೋದ್ಯಮಗಳನ್ನು ಏಪ್ರಿಲ್ 15 ರ ನಂತರ ಆರಂಭಿಸಲು ಚಿಂತನೆ ನಡೆಸಿದೆ. ಇದರಿಂದ ಬಡವರ ಜೀವನೋಪಾಯಕ್ಕೂ ತೊಂದರೆಯಾಗದು ಮತ್ತು ದೇಶದ ಆರ್ಥಿಕತೆ ಮೇಲೂ ತೀರಾ ಹೊಡೆತ ಬೀಳುವುದು ತಪ್ಪುತ್ತದೆ.