2020-21ರ ಶೈಕ್ಷಣಿಕ ವರ್ಷ ಇಳಿಸಲು ಖಾಸಗಿ ಶಾಲೆಗಳ ಒಕ್ಕೂಟ ಆಗ್ರಹ

ಸೋಮವಾರ, 13 ಏಪ್ರಿಲ್ 2020 (10:49 IST)

ಬೆಂಗಳೂರು : ಲಾಕ್ ಡೌನ್ ಹಿನ್ನಲೆಯಲ್ಲಿ 2020-21ರ ಶೈಕ್ಷಣಿಕ ವರ್ಷ ಇಳಿಸಲು  ರಾಜ್ಯ ಸರ್ಕಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ  ಆಗ್ರಹಿಸಿದೆ.

 

ಮಾರ್ಚ್, ಏಪ್ರಿಲ್ ತಿಂಗಳಲ್ಲೇ ಮುಗಿಯಬೇಕಿದ್ದ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆ ಇನ್ನೂ ಮುಗಿದಿಲ್ಲ. ಲಾಕ್ ಡೌನ್ ಮುಗಿದ ನಂತರವೇ ಪರೀಕ್ಷೆ, ಮೌಲ್ಯಮಾಪನ ಮಾಡಲಾಗುವುದು.  ಅಲ್ಲದೇ ಕೊರೊನಾ ಭೀತಿ ಹಿನ್ನಲೆ ಶಾಲೆ ತೆರೆದರೂ ಮಕ್ಕಳು ಬರುವುದು ಡೌಟ್. ಸಮವಸ್ತ್ರ, ಪಠ್ಯ ಸಿಗಲು ಮತ್ತಷ್ಟು ದಿನ ಬೇಕು. ಹಾಗಾಗಿ ಶೈಕ್ಷಣಿಕ ವರ್ಷ 8 ತಿಂಗಳಿಗೆ ಇಳಿಸಲು ಖಾಸಗಿ ಶಾಲೆಗಳ ಒಕ್ಕೂಟ  ಆಗ್ರಹಿಸಿದೆ.  
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ