ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಶಿಶು ಅಪಹರಣ

ಬುಧವಾರ, 11 ಜುಲೈ 2018 (17:47 IST)
ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣವಾಗಿದೆ. ಹೆಣ್ಣು ಕೂಸು ಅಪಹರಣಕ್ಕೆ ಆಸ್ಪತ್ರೆ ಸಿಬಂದಿ ಬೇಜವಾಬ್ದಾರಿಯುತ ಕಾರಣ ಅಂತ ಪೋಷಕರು ದೂರಿದ್ದಾರೆ. ಕೋಲಾರ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣು ಶಿಶುವಿನ ಅಪಹರಣವಾಗಿದೆ.

ಬುಧವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಮುಳಬಾಗಲು ತಾಲೂಕಿನ ವಮ್ಮಸಂದ್ರ ಗ್ರಾಮದ ನಾರಾಯಣಸ್ವಾಮಿ ಮತ್ತು ವೇಣುಕುಮಾರಿ ದಂಪತಿಯ ಮಗು ಅಪಹರಣಕ್ಕೆ ಒಳಗಾಗಿದೆ. ಜನಿಸಿದ 24 ಗಂಟೆಯ ಒಳಗೆ ಅಪರಿಚಿತರಿಂದ ಈ ಕೃತ್ಯ ಜರುಗಿದೆ.  ಕೋಲಾರದ ಈ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವೇಣುಕುಮಾರಿ ಅವರಿಗೆ ಸೋಮವಾರ ಹೆಣ್ಣುಶಿಶು ಜನಿಸಿದೆ.

ಬುಧವಾರ ಬೆಳಗಿನ ಜಾವ 2 ಗಂಟೆವರೆಗೂ ಮಗುವಿನ ಆರೈಕೆಯಲ್ಲಿದ್ದ ಪೋಷಕರು ನಿದ್ರೆಗೆ ಜಾರಿದಾಗ ಅಪರಿಚಿತರು ಮಗುವನ್ನು ಹೊತ್ತೊಯ್ದಿದ್ದಾರೆ. ಮಗುವಿನ ನಾಪತ್ತೆಗೆ ಆಸ್ಪತ್ರೆಯ ಭದ್ರತಾ ವೈಫಲ್ಯ ಕಾರಣ ಅಂತ ಕಂದನನ್ನು ಕಳೆದೊಕೊಂಡವರು ದೂರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ