ಹೆಣ್ಣುಮಕ್ಕಳೇ ರಾಯಭಾರಿಯಾಗಿ ಜಾಗೃತಿ ಮೂಡಿಸಿ: ದಿನೇಶ್ ಗುಂಡೂರಾವ್ ಕರೆ

ಮಂಗಳವಾರ, 12 ಸೆಪ್ಟಂಬರ್ 2023 (08:48 IST)
ಮಂಗಳೂರು : ನನ್ನ ಮೈತ್ರಿ ಯೋಜನೆಗೆ ಮೆನ್ಸ್ಟ್ರುಯಲ್ ಕಪ್ ಬಳಸುವ ಹೆಣ್ಣುಮಕ್ಕಳೇ ರಾಯಭಾರಿಗಳು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳೂರಿನಲ್ಲಿ ಸೋಮವಾರ ನನ್ನ ಮೈತ್ರಿ ಮೆನ್ಸ್ಟ್ರುಯಲ್ ಕಪ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಸ್ಯಾನಿಟರಿ ನ್ಯಾಪ್ಕಿನ್ ಬದಲು ಮೆನ್ಸ್ಟ್ರುಯಲ್ ಕಪ್ ಬಳಕೆ ಬಗ್ಗೆ ಬಹುತೇಕ ಹೆಣ್ಣುಮಕ್ಕಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಲ್ಲದೇ ಈ ಕಪ್ಗಳು ಪರಿಸರ ಸ್ನೇಹಿಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಮೊದಲು ಶುಚಿ ಯೋಜನೆಯಡಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿತರಿಸಲಾಗುತಿತ್ತು. ನ್ಯಾಪ್ಕಿನ್ಗಳ ಡಿಸ್ಪೋಸಲ್ ಹೆಣ್ಣು ಮಕ್ಕಳಿಗೆ ದೊಡ್ಡ ಸಮಸ್ಯೆಯಾಗಿತ್ತು. ಈ ಬಗ್ಗೆ ಹೆಣ್ಣುಮಕ್ಕಳು ತುಂಬಾ ಮುಜುಗರ ಪಟ್ಟುಕೊಳ್ಳುತ್ತಿದ್ದರು. ಮುಟ್ಟಿನ ವಿಚಾರದಲ್ಲಿ ಮಾತನಾಡಲು ಯಾರೂ ಹಿಂಜರಿಯುವ ಅಗತ್ಯವಿಲ್ಲ. ಇದೊಂದು ನೈಸರ್ಗಿಕ ಕ್ರಿಯೆ ಅಷ್ಟೇ. ನ್ಯಾಪ್ಕಿನ್ ಬದಲು ಮೆನ್ಸ್ಟ್ರುಯಲ್ ಕಪ್ಗಳನ್ನು 5-6 ವರ್ಷಗಳ ವರೆಗೆ ಮರುಬಳಕೆ ಮಾಡಬಹುದು. ಹೀಗಾಗಿ ಹೆಣ್ಣುಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಈಗಾಗಲೇ ಚಾಮರಾಜನಗರದಲ್ಲಿ 300 ಹೆಣ್ಣುಮಕ್ಕಳಿಗೆ ಮೆನ್ಸ್ಟ್ರುಯಲ್ ಕಪ್ಗಳನ್ನು ನೀಡಿ, ಅಭಿಪ್ರಾಯ ಸಂಗ್ರಹಿಸಲಾಗಿದೆ. ನ್ಯಾಪ್ಕಿನ್ ಬದಲು ಮೈತ್ರಿ ಕಪ್ ಬಳಕೆಗೆ ಹೆಣ್ಣುಮಕ್ಕಳಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ಪ್ರಯೋಗಿಕವಾಗಿ ತೆಗೆದುಕೊಳ್ಳಲಾಗಿದೆ.

ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಎರಡು ಜಿಲ್ಲೆಗಳಿಗೆ 15,000 ಮೆನ್ಸ್ಟ್ರುಯಲ್ ಕಪ್ಗಳ ವಿತರಣೆಗೆ ಇಂದು ಚಾಲನೆ ನೀಡಿದ್ದೇವೆ. ಈ ಯೋಜನೆ ಯಶಸ್ವಿಯಾಗುವ ವಿಶ್ವಾಸವಿದ್ದು, ರಾಜ್ಯಾದ್ಯಂತ ವಿಸ್ತರಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ