ವ್ಯವಹಾರದ ಸಣ್ಣ ಸಾಕ್ಷಿ ಇದ್ರೆ ಕೊಡಿ.ಇಡೀ ನಮ್ಮ ಕುಟುಂಬ ರಾಜಕೀಯ ನಿವೃತ್ತಿ ಹೊಂದುತ್ತಿವಿ-ಹೆಚ್ ಡಿ ಕೆ

ಶುಕ್ರವಾರ, 18 ಆಗಸ್ಟ್ 2023 (18:00 IST)
40% ಕಮಿಷನ್ ಆರೋಪ ಕಮಿಷನ್ ನೇಮಕ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.ಮೋಹನ್ ದಾಸ್ ವರದಿ ೨೦೧೬-೧೭ ರಲ್ಲೊ ಗಾಂಧಿನಗರ, ಮಲ್ಲೇಶ್ವರಂ ನಲ್ಲಿ ಜಾಬ್ ಕೋಡ್ ಬಗ್ಗೆ ತನಿಖೆ ಮಾಡಿ ವರದಿ ಕೊಟ್ರಲ್ಲಾ ಎಲ್ಲಿದೆ ವರದಿ ಅದು,ಮೊದಲು ವೀರಪ್ಪ ಅನ್ನೋರಿಗೆ ಕೊಡ್ತಿವಿ ಅಂತಾ ಹೇಳಿದ್ರು.ಅವರು ಒಪ್ಪಲಿಲ್ವೇನೊ.. ಇಗ ನಾಗಮೋಹನ್ ದಾಸ್ ಅವರಿಗೆ ಕೊಟ್ಟಿದ್ದಾರೆ.ನಾಗಮೋಹನ್ ದಾಸ್ ಕೈಯಲ್ಲಿ ಏನ್ ಬೇಕಾದ್ರು ಬರೆಸಿಕೊಂಡ್ರು ಕೂಡ.ಅದು ಏನು ಉಪಯೋಗಕ್ಕೆ ಬರೋಲ್ಲಾ.ಇದೆಲ್ಲಾ ಸಮಯ ಕಳಿಯಲು ಮಾಡ್ತಿರೋದು ಅಂತಾ ಕುಮಾರಸ್ವಾಮಿ ಹೇಳಿದ್ರು.
 
 ನೈಸ್ ವಿಚಾರ ಕುಮಾರಸ್ವಾಮಿ ವ್ಯವಹಾರ ಮಾಡ್ತಾರೇ ಎಂಬ ಸುರೇಶ್ ಹೇಳಿಕೆ ವಿಚಾರವಾಗಿ ಫ್ರಿಯಾಗಿ ಮಾತಾಡೋಣ ಅವರು ಹೇಳಿದ್ದಾರಲ್ಲವೇ,ನೈಸ್ ಕಂಪನಿಗೆ ಸೈನ್ ಹಾಕಿದವರು ಯಾರು..?ಬೆಂಗಳೂರು ಮೈಸೂರು ರಸ್ತೆ ಮಾಡೋದಕ್ಕೆ ದೇವೇಗೌಡ್ರು ಸೈನ್ ಹಾಕಿದ್ರು.ದೇವೇಗೌಡ್ರು ಸೈನ್ ಹಾಕಿದ್ರು ಇವರಿಬ್ಬರು ಅಣ್ಣತಮ್ಮಂದಿರಿಗೆ ,ಆ ನೈಸ್ ರಸ್ತೆ ಹೆಸರಲ್ಲಿ ಅವನ‌ ಜೊತೆ   ಶಾಮೀಲಾಗಿ ರೈತರ ಜಮೀನು ಒಡೆಯಲಂತನಾ?ವ್ಯವಹಾರ ಮಾಡಿಕೊಂಡಿರುವವರು ಇವರು,ನಾನು ವ್ಯವಹಾರ ಮಾಡಿದ್ದಿನಾ ನೈಸ್ ಕಂಪನಿ ಜೊತೆ ನಾನು ಮಾಡಿರೊ ವ್ಯವಹಾರದ ಸಣ್ಣ ಸಾಕ್ಷಿ ಇದ್ರೆ ಕೊಡಿ.ಇಡೀ ನಮ್ಮ ಕುಟುಂಬ ರಾಜಕೀಯ ನಿವೃತ್ತಿ ಹೊಂದುತ್ತಿವಿ ಎಂದು ಹೆಚ್ ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
 
ಇನ್ನೂ ರೈತರನ್ನ ಉಳಿಸೋದು ಹೆಂಗೆ ಅಂತ ಸಲಹೆ ತೆದುದುಕೊಳ್ತಾರಂತೆ ರಸ್ತೆ ಆದ್ರೆ ತೊಂದರೆ ಆಗುತಂತೆ ೨೫ ವರ್ಷ ಬೇಕಾ ರಸ್ತೆ ಮಾಡೋಕೆ,ಸೈನ್ ಯಾವನ್ ರಿ ಹಾಕಿದ್ದು ಗೊತ್ತಿದ್ಯಾ ಅವನಿಗೆ,ದೇವೇಗೌಡರ ಕುಟುಂಬ ಬಗ್ಗೆ ಮಾತಾಡೋ ವ್ಯಕ್ತಿನಾ ಕೇಳ್ತಿನಿ.ನಿಮ್ಮ ಅಣ್ಣಾ ಯುಡಿ ಮಿನಿಸ್ಟರ್ ಆಗಿದ್ದಾಗ ಫ್ರೇಮ್ ವರ್ಕ್ ಅಗ್ರಿಮೆಂಟ್ ಏನಿತ್ತು.ಸುಪ್ರೀಂ ಕೋರ್ಟ್ ಹೈ ಕೊರ್ಟ್ ಡೈರೆಕ್ಷನ್ ಏನಿತ್ತು?ಇವರ ಅಣ್ಣನೆ ಅಲ್ವಾ ಸೈನ್ ಹಾಕಿದ್ದು.೨ ಸಾವಿರ ಎಕರೆ ಯಾರ ಹೆಸರಿಗೆ ಮಾಡಿಕೊಳ್ಳೊಕೆ ಹೊರಟಿದ್ದಿರಾ?ನಿಮ್ಮ ಕುಟುಂಬದ ಹೆಸರಿಗೆ ಮಾಡಲು ಹೊರಟಿದ್ದಿರಾ?ವ್ಯವಹಾರ ನಡೆಸ್ತಿರೋದು ನೀವು?ನಮ್ಮ ಕುಟುಂಬದ ಬಗ್ಗೆ ಮತಾಡ್ತಿರಾ? ಎಂದು ಡಿಕೆ ಸುರೇಶ್ ವಿರುದ್ದ ದ ಹೆಚ್ ಡಿಕೆ ವಾಗ್ದಾಳಿ ನಡೆಸಿದ್ದಾರೆ..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ