ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಲು ಆದ್ಯತೆ ಕೊಡಿ : ಗೆಹ್ಲೋಟ್

ಶುಕ್ರವಾರ, 4 ಆಗಸ್ಟ್ 2023 (10:35 IST)
ಬೆಂಗಳೂರು : ರೈತರು ಸಾಂಪ್ರದಾಯಿಕ ಬೆಳೆಗಳೊಂದಿಗೆ ಔಷಧೀಯ ಮತ್ತು ಗಿಡಮೂಲಿಕೆಗಳ ಬೆಳೆಗಳ ಮುಂದುವರಿದ ಕೃಷಿ ಮಾಡುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಹೇಳಿದರು.
 
ನಗರದ ಜಿಕೆವಿಕೆ ಸಭಾಂಗಣದಲ್ಲಿ ನಡೆದ ಕೃಷಿ ವಿಶ್ವವಿದ್ಯಾಲಯದ 57ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರವು ಭಾರತೀಯ ಆರ್ಥಿಕತೆಯ ಮೂಲ ಸ್ತಂಭವಾಗಿದೆ. ಈ ವಲಯವು ದೇಶದ ಜಿಡಿಪಿಗೆ ಗಣನೀಯ ಕೊಡುಗೆ ನೀಡುತ್ತದೆ. ಇಂದು ಪ್ರಪಂಚದಾದ್ಯಂತ ಔಷಧೀಯ ಮತ್ತು ಸುಗಂಧ ಸಸ್ಯಗಳ ಆಧಾರದ ಮೇಲೆ ವ್ಯಾಪಾರ ಹೆಚ್ಚುತ್ತಿದೆ.

ಈಗ ನಮ್ಮ ರೈತರು ಲಭ್ಯವಿರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಮಾತ್ರವಲ್ಲದೆ ತಮ್ಮ ಸಾಂಪ್ರದಾಯಿಕ ಬೆಳೆಗಳೊಂದಿಗೆ ಔಷಧೀಯ ಮತ್ತು ಗಿಡಮೂಲಿಕೆಗಳ ಬೆಳೆಗಳ ಮುಂದುವರಿದ ಕೃಷಿಯನ್ನು ಮಾಡುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಮಯ ಬಂದಿದೆ ಎಂದು ತಿಳಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ