[12:22, 11/7/2021] Geethanjali: ಆಪತ್ಕಾಲದ ನೆಂಟ ಚಿನ್ನದ (Gold Price Today) ಬೆಲೆ ಕಳೆದ ಒಂದು ವಾರದಿಂದ ಏರಿಳಿತವಾಗುತ್ತಿದೆ. ದೀಪಾವಳಿ (Diwali) ಆರಂಭದಲ್ಲಿ ಕೊಂಚ ಇಳಿಕೆಯಾಗಿದ್ದ, ಚಿನ್ನದ ದರ ಇಂದ ಮತ್ತಷ್ಟು ಏರಿಕೆ ಕಂಡಿದೆ. ಶನಿವಾರ ಮುಂಬೈ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು.
ಆದ್ರೆ ಬೆಂಗಳೂರಿನಲ್ಲಿ (Benglaluru Gold Price Today) 150 ರೂ.ಗಳಷ್ಟು ಏರಿಕೆಯಾಗಿತ್ತು. ಇಂದು ಸಹ ಚಿನ್ನದ ಬೆಲೆ 440 ರೂ.ಗೆ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 45,100 ರೂ. ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 49,200 ರೂ.ಗಳಿದೆ. ನವೆಂಬರ್ 3ರಂದು ಚಿನ್ನದ ಬೆಲೆಯಲ್ಲಿ 250 ರೂ.ಗಳಷ್ಟು ಇಳಿಕೆಯಾಗಿತ್ತು. ಇದಕ್ಕೂ ಮೊದಲು ಅಕ್ಟೋಬರ್ 27ರಂದು ಬರೋಬ್ಬರಿ 300 ರೂ. ಇಳಿಕೆಯಾಗಿತ್ತು. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 4,510 ರೂ.ಗಳಷ್ಟಿದೆ.
ಬೆಳ್ಳಿ ಬೆಲೆ
ಹೂಡಿಕೆದಾರರ ಪ್ರಿಯವಾದ ಲೋಹ ಬೆಳ್ಳಿ. ಹಾಗಾಗಿ ಬೆಳ್ಳಿಯ (Sliver Price Today) ಬೆಲೆಯೂ ಪ್ರತಿನಿತ್ಯ ಏರಳಿತವಾಗಿರುತ್ತದೆ. ಚಿನ್ನದ ಜೊತೆಯಲ್ಲಿಯೇ ಬೆಳ್ಳಿ ಬೆಲೆ ಸಹ ಏರಿಕೆಯಾಗಿದೆ, 10 ಗ್ರಾಂ ಬೆಳ್ಳಿ ಬೆಲೆ 643 ರಿಂದ 644 ರಷ್ಟು ಏರಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿ ಬೆಲೆ 64,440 ರೂ, ಇದೆ. ಕಳೆದ ಕೆಲ ದಿನಗಳಿಂದಲೂ ನಿಧಾನಗತಿಯಲ್ಲಿ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ.