ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿದರೆ ಅಧಿಕ ಬಡ್ಡಿ: ಸಾರ್ವಜನಿಕರಿಗೆ ಅಸೆ ತೋರಿಸಿ ವಂಚನೆ ಬಯಲು

ಭಾನುವಾರ, 7 ನವೆಂಬರ್ 2021 (20:39 IST)
company
ಬೆಂಗಳೂರು: ಚೈನ್ ಲಿಂಕ್ ಮೂಲಕ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಶೇ 20 ರಷ್ಟು ಲಾಭಗಳಿಸಬಹುದು ಎಂದು ಸಾರ್ವಜನಿಕರನ್ನು ನಂಬಿಸಿ ಕೋಟಿಗಟ್ಟಲೆ ಹಣ ವಂಚಿಸಿದ್ದ ಪೋಮೋ ಎಕ್ಸ್ ಕಂಪನಿಯ ಮೂವರನ್ನು ಸಿಸಿಬಿ (ಕೇಂದ್ರ ಅಪರಾಧ ಪತ್ತೆ ದಳ) ಪೊಲೀಸರು ಬಂಧಿಸಿದ್ದಾರೆ. 
 
ಬಂಧಿತರನ್ನು ನಗರದ ಹೆಚ್.ಎಸ್.ಆರ್ ಲೇಔಟ್ ಠಾಣೆಯ ನಿವಾಸಿಗಳಾದ ರಾಘವೇಂದ್ರ, ನಾಗರಾಜು ಮತ್ತು ಶಿವಮೂರ್ತಿ ಎಂದು ಗುರುತಿಸಲಾಗಿದೆ. 
 
ಆರೋಪಿಗಳು ಹಲವು ವ್ಯಕ್ತಿಗಳ ಜೊತೆಗೆ ಶಾಮೀಲಾಗಿ ಪೋಮೋ ಎಕ್ಸ್ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿಗೆ ಬಂಡವಾಳ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಪೋಮೋ ಎಕ್ಸ್  ಕಂಪನಿ ಅಮೆರಿಕಾ, ಸಿಂಗಾಪುರ, ಚೀನಾ ದೇಶಗಳಲ್ಲಿ ಕಚೇರಿ ಹೊಂದಿರುವುದಾಗಿ ನಂಬಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 
 
ಚೈನ್ ಲಿಂಕ್: 
 
ಪೋಮೋ ಎಕ್ಸ್ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿ ಖರೀದಿಸಿದ ನಂತರ ಬೇರೆ ವ್ಯಕ್ತಿಗಳನ್ನು ಕರೆ ತಂದು ಅವರಿಂದ ಚೈನ್ ಲಿಂಕ್ ಆಧರಿಸಿ ಎಡ ಮತ್ತು ಬಲದಲ್ಲಿ ಹೂಡಿಕೆ ಮಾಡಿಸಿದರೆ ಭಾರೀ ಲಾಭ ಗಳಿಸಬಹುದು ಎಂದು ವಂಚಕರು ನಂಬಿಸುತ್ತಿದ್ದರು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ