ರಾಜ್ಯದಲ್ಲಿ ಬಂಗಾರ ಲೇಪಿತ ಗುರುದ್ವಾರ ಉದ್ಘಾಟನೆ

ಬುಧವಾರ, 1 ಆಗಸ್ಟ್ 2018 (16:52 IST)
ಪ್ರತಿಷ್ಠಿತ ಗುರುದ್ವಾರ  ದೇವಸ್ಥಾನ 10 ಕೆಜಿ ಬಂಗಾರದಲ್ಲಿ ಲೇಪನವಾಗಿದ್ದು, ಚಿನ್ನದಿಂದ ಲೇಪನಗೊಂಡ ದೇವಸ್ಥಾನದ ಮಂಟಪ ಉದ್ಘಾಟನೆಗೊಂಡಿತು. ಈ ಮೂಲಕ ದರ್ಶನಕ್ಕೆಂದು ಬರುವ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ  ಕಣ್ಮಣ ಸೆಳೆಯುತ್ತಿದೆ.

ರಾಜ್ಯದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಬೀದರ್  ಜಿಲ್ಲೆಯಲ್ಲಿ ಗೋಲ್ಡನ್ ಟೆಂಪಲ್ ಗಳಲ್ಲೊಂದಾದ ಗುರುದ್ವಾರ ದೇವಸ್ಥಾನ ಬರೊಬ್ಬರಿ ಹತ್ತು ಕೆಜಿ ಚಿನ್ನದಲ್ಲಿ ಲೇಪನ ಮಾಡಲಾಗಿದೆ. ಕೋಟಿ ಕೋಟಿ ರೂ. ವೆಚ್ಚದಲ್ಲಿ ಗುರುದ್ವಾರ ನವೀಕರಣಗೊಂಡಿದ್ದು ಪ್ರವಾಸಿಗರಿಗೆ ಕೈ ಬಿಸಿ ಕರೆಯುತ್ತಿದೆ.

ದೇವಸ್ಥಾನದ ಗೋಡೆಗಳಲ್ಲಿ ತೆಗೆಯಲಾದ  ಮೀನಾಕರಿ ಕಲೆ ಗೋಡೆಗಳಿಗೆ ಅಮೃತಶಿಲೆ ಹೊಳಪು ಚಿತ್ರಗಳು ನೊಡುಗರ ಕಣ್ಮನ ಸೆಳೆಯುತ್ತಿದೆ. ಬರೋಬ್ಬರಿ ಮೂರು ವರ್ಷಗಳಲ್ಲಿ  ಶ್ರೀ ದರ್ಬಾರ ಸಾಹೇಬ್ ನವೀಕರಣ ಮುಗಿದಿದೆ. 10 ಕೆಜಿ ಬಂಗಾರದ ಮಂಟಪ ! ಸಿಖ್ಖರಿಗೆ ಗುರು ಗ್ರಂಥವೇ ಧರ್ಮಗುರು ಆಗಿದೆ. ಗುರು ಗ್ರಂಥ ಸಾಹೀಬ್ ಇಡಲು 10 ಕೆಜಿ ಶುದ್ಧ ಚಿನ್ನದಲ್ಲಿ ನಿರ್ಮಿಸಿದ ಸುಂದರ  ಚಿನ್ನದ ಮಂಟಪ ಇದು ಆಗಿದೆ. ಈ ದೇವಸ್ಥಾನದ ಚಿನ್ನದ ಲೇಪನವನ್ನು  ಭಕ್ತರ ನೆರವಿನಿಂದಲೇ ಮುಕ್ತಾಯಗೊಳಿಸಲಾಗಿದೆ. ಚಿನ್ನದಿಂದ ಲೇಪನಗೊಂಡ ಗುರುದ್ವಾರದ ಮಂಟಪ ಉದ್ಘಾಟನೆಗೊಂಡಿದ್ದು, ಭಕ್ತರನ್ನು ಮತ್ತಷ್ಟು ಆಕರ್ಷಿಸುತ್ತಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ