ಮತ್ತೆ ಗಬ್ಬೆದ್ದು ನಾರಲಿದ್ಯಾ ಸಿಲಿಕಾನ್ ಸಿಟಿ ಬೆಂಗಳೂರು,,!

ಸೋಮವಾರ, 13 ಮಾರ್ಚ್ 2023 (15:55 IST)
ಸಿಲಿಕಾನ್ ಸಿಟಿ, ಐಟಿ ಸಿಟಿ, ಗಾರ್ಡನ್ ಸಿಟಿ ಅಂತಾ ಕರೆಸಿಕೊಳ್ಳುವ ನಮ್ಮ‌ ಬೆಂಗಳೂರು ಗಾರ್ಬೇಜ್ ಸಿಟಿಯಾಗಲಿದೆ.ಕೆಲಸ ಖಾಯಂ ಗೊಳಿಸದ ಹಿನ್ನೆಲೆ ಪೌರಕಾರ್ಮಿಕರಿಂದ ಮುಷ್ಕರ ಆಯ್ತು.ಇದೀಗ ಚಾಲಕರಿಂದ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
 
ಕೆಲಸ ಖಾಯಂ ಗೊಳಿಸದ ಹಿನ್ನೆಲೆ ಚಾಲಕರ ಮುಷ್ಕರ ನಡೆಸ್ತಿದ್ದಾರೆ.ಬಿಬಿಎಂಪಿ ಪೌರಕಾರ್ಮಿಕರ ಸಂಘ ಮತ್ತು ಕಾರ್ಮಿಕ ಸಂರಕ್ಷಣಾ ಟ್ರೇಡ್ ಯೂನಿಯನ್ ಸಮ್ಮುಖದಲ್ಲಿ ಮನವಿ ಪತ್ರ ನೀಡಿದ್ದು,ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸವಿಲೇವಾರಿಯ ವಾಹನ ಚಾಲಕರು, ಸಹಾಯಕರು, ಲೋಡರ್ ಮತ್ತು ಕ್ಲೀನರ್ ಗಳು ಬಿಬಿಎಂಪಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ಕಸದ ವಿಲೇವಾರಿಯಲ್ಲಿ ತೊಡಗಿರುವ ಎಲ್ಲಾ ವಾಹನ ಚಾಲಕರು, ಸಹಾಯಕರು, ಲೋಡರ್ ಮತ್ತು ಕ್ಲೀನರ್ ಗಳನ್ನು ಖಾಯಂಗೊಳಿಸಬೇಕು ಮತ್ತು ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ