ನನ್ನ ಕ್ಷೇತ್ರದಲ್ಲಿ ಗೋಲ್‍ಮಾಲ್ ನಡೆದಿದೆ- ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪ

ಸೋಮವಾರ, 14 ಮೇ 2018 (08:15 IST)
ಹುಬ್ಬಳ್ಳಿ : ತಮ್ಮ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಲು ಗೋಲ್ ಮಾಲ್ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು  ಆರೋಪಿಸಿದ್ದಾರೆ.


ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,’ ನನ್ನ ಕ್ಷೇತ್ರದ ಸಾವಿರಾರು ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ. ಹಾಗಾಗಿ ನನ್ನ ಕ್ಷೇತ್ರದ ಹಲವರು ಮತದಾನದಿಂದ ವಂಚಿತರಾಗಿದ್ದಾರೆ ಹಾಗೂ ಮತದಾನ ಪ್ರಮಾಣ ಕಡಿಮೆಯಾಗಿದೆ. ನನ್ನನ್ನು ಸೋಲಿಸಲು ವಾಮಮಾರ್ಗ ಅನುಸರಿಸಲಾಗಿದ್ದು, ಉದ್ದೇಶಪೂರ್ವಕ ವಾಗಿಯೇ ಮತದಾರರ ಹೆಸರನ್ನು ಬೇರೆ ಕ್ಷೇತ್ರಕ್ಕೆ ಬದಲಾಯಿಸಲಾಗಿದೆ. ನನ್ನ ಕ್ಷೇತ್ರದಲ್ಲಿ ಗೋಲ್‍ಮಾಲ್ ನಡೆದಿದೆ. ಹಲವು ಕಡೆ ಇವಿಎಂ ಯಂತ್ರ ಅದಲು ಬದಲು ಮಾಡಲಾಗಿದೆ’ ಎಂದು ಚುನಾವಣಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಜೊತೆಗೆ  ‘ಏನೇ ಆದರೂ ಗೆಲುವು ನನ್ನದೇ’ ಎಂಬ ವಿಶ್ವಾಸ ಕೂಡ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ