ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ದಿಲ್ಲಿಯಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ವಿಮಾನವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂದು ಪೈಲೆಟ್ ಗಳ ವಿರುದ್ಧ ದೂರು ನೀಡಲಾಗಿದೆ.
ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನವು ತೀವ್ರವಾಗಿ ಕುಲುಕಾಡುತ್ತಿತ್ತು, ಒಂದು ಬದಿಗೆ ವಾಲಿತ್ತು, ಎತ್ತರವನ್ನು ತೀವ್ರವಾಗಿ ಕಳೆದುಕೊಂಡಿತ್ತು ಮತ್ತು ಪ್ರಯಾಣದುದ್ದಕ್ಕೂ ಭಾರೀ ಶಬ್ದವನ್ನುಂಟು ಮಾಡುತ್ತಿತ್ತು. ವಿಮಾನದಲ್ಲಿಯ ಆಟೋಪೈಲಟ್ ವ್ಯವಸ್ಥೆ ಕೂಡ ಕೆಲಸ ಮಾಡುತ್ತಿರಲಿಲ್ಲ. ವಿಮಾನದಲ್ಲಿ ರಾಹುಲ್ ಜೊತೆಗೆ ಇನ್ನೂ ಮೂವರು ಪ್ರಯಾಣಿಕರಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮೂರನೇ ಪ್ರಯತ್ನದಲ್ಲಷ್ಟೇ ವಿಮಾನವು ಕೆಳಗಿಳಿಯಲು ಸಾಧ್ಯವಾಗಿತ್ತು ಮತ್ತು ಹಾಗೆ ಮಾಡುವಾಗ ತೀವ್ರವಾಗಿ ಕಂಪಿಸಿತ್ತು. ಇದರಿಂದ ಆತಂಕ ಸೃಷ್ಟಿಸಿತ್ತು ಎಂದು ಪೈಲೆಟ್ ಗಳ ವಿರುದ್ಧ ಡಿಜಿಪಿ ನೀಲಮಣಿ ಎನ್.ರಾಜು ಅವರಿಗೆ ದೂರು ಸಲ್ಲಿಸಲಾಗಿದೆ.
ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಖಾಸಗಿ ವಿಮಾನದ ಪೈಲಟ್ ಮತ್ತು ಸಿಬ್ಬಂದಿಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಹಾಗೇ ಈ ವಿಷಯ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ರಾಹುಲ್ ಗಾಂಧಿಯವರಿಗೆ ಫೋನ್ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿದರು ಎಂಬುದಾಗಿಯೂ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ