ಅರ್ಹ ಇ ಶ್ರಮ್ ಕಾರ್ಮಿಕರಿಗೆ ಆಹಾರ ಮತ್ತು ನಾಗರಿಕಾ ಇಲಾಖೆಯಿಂದ ಆದ್ಯತಾ ಪಡಿತರ ಚೀಟಿ ಸಿಗಲಿದೆ. ಇದನ್ನು ನಿಮ್ಮ ಹತ್ತಿರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಸಂಪರ್ಕಿಸಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ನಂಬರ್ 18004259339 ಅಥವಾ ಸಹಾಯವಾಣಿ 1967 ಕ್ಕೆ ಬೆಳಿಗ್ಗೆ 10 ರಿಂದ ಸಂಜೆ 5.30 ರೊಳಗಾಗಿ ಕರೆ ಮಾಡಬಹುದಾಗಿದೆ.
ಆದ್ಯತಾ ಪಡಿತರ ಚೀಟಿ ಹೊಂದಿರುವವರಿಗೆ ಸಿಗುವ ಸೌಲಭ್ಯಗಳೇನು
ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಒಂದು ಕುಟುಂಬವು ಪ್ರತೀ ವ್ಯಕ್ತಿಗೆ 5 ಕಿ.ಗ್ರಾಂನಂತೆ ಒಂದು ತಿಂಗಳಲ್ಲಿ ಆಹಾರ ಧಾನ್ಯಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಈ ಪಡಿತರ ಚೀಟಿ ಹೊಂದಿದವರಿಗೆ ಅಕ್ಕಿ ಪ್ರತೀ ಕೆ.ಜಿಗೆ 3 ರೂ., ಗೋಧಿ 2 ರೂ.ಗಳಿಗೆ ಸಿಗುತ್ತದೆ. ಈ ಬೆಲೆಯನ್ನು ಕಾಲ ಕಾಲಕ್ಕೆ ಪರಿಷ್ಕರಿಸಲಾಗುತ್ತದೆ.