ಬೆಂಗಳೂರಿನಿಂದ 22 ಜಿಲ್ಲೆ ಸಂಪರ್ಕಿಸುವ ವಾಹನ ಸವಾರರಿಗೆ ಗುಡ್ ನ್ಯೂಸ್

geetha

ಭಾನುವಾರ, 28 ಜನವರಿ 2024 (14:00 IST)
ಬೆಂಗಳೂರು-ಬೆಂಗಳೂರಿನಿಂದ 22 ಜಿಲ್ಲೆ ಸೇರಿದಂತೆ ಗೋವಾ, ಮಹಾರಾಷ್ಟ್ರ ಸಂಪರ್ಕಿಸುವ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಲಾಗಿದೆ ‌.ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶದ 5 ಕೀ.ಮೀಟರ್ ಉದ್ದದ ಪೀಣ್ಯ ಮೇಲ್ಸೇತುವೆ ಮೇಲೆ ಬಸ್. ಲಾರಿ, ಸಂಚಾರ ಓಡಾಟಕ್ಕೆ ಕಳೆದ ಎರಡು ವರ್ಷದಿಂದ ಬ್ರೇಕ್ ಬಿದ್ದಿತ್ತು.ಎರಡು ವರ್ಷದಿಂದ ಗ್ರಹಣ ಹಿಡಿದ್ದಿದ್ದ  ಪೀಣ್ಯ ಮೆಲ್ಸೇತುವೇಗೆ  ಇದೀಗ ಬಿಗ್ ರಿಲೀಫ್ ಸಿಕ್ಕಿದೆ.
 
ಇತ್ತೀಚೆಗಷ್ಟೇ ಪೀಣ್ಯ ಫ್ಲೈ ಓವರ್ ಮೇಲೆ 30 ಟನ್ ಲೋಡ್ ಟೆಸ್ಟಿಂಗ್ ಮಾಡಿ ವರದಿ ಮಾಡಲಾಗಿತ್ತು.ಮೂವತ್ತು ಟನ್ ತೂಕದ 16 ಟ್ರಕ್ ಗಳಿಂದ ಲೋಡ್ ಟೆಸ್ಟಿಂಗ್ ಮಾಡಿ ವರದಿಯನ್ನು ಐಐಎಸ್ಸಿ ಸಿದ್ದಪಡಿಸಿತ್ತು. ಲೋಡ್ ಟೆಸ್ಟಿಂಗ್ ಮಾಡಿದ್ದ ಐಐಎಸ್ಸಿ ವರದಿಯ ಬಗ್ಗೆ ಪಿನ್ ಟು ಪಿನ್ ಮಾಹಿತಿ ಐಐಎಸ್ಸಿ ತಜ್ಞ ಕೊಟ್ಟಿದ್ದಾರೆ.ಲೋಡ್ ಟೆಸ್ಟಿಂಗ್ ವರದಿಯ ಬಗ್ಗೆ ಸದ್ಯದಲ್ಲೇ ನ್ಯಾಷನಲ್‌ ಹೈವೇ ಅಥಾರಿಟಿ ಆಫ್ ಇಂಡಿಯಾ ಜೊತೆ ಮಾತುಕತೆ ಐಐಎಸ್ಸಿ ನಡೆಸಲಿದೆ.NHAI ಜೊತೆ ಮಾತುಕತೆ ನಡೆಸಿದ ಬಳಿಕ ಅಂದ್ರೆ ಇನ್ನೊಂದು ವಾರದಲ್ಲೇ ಎಲ್ಲಾ ವಾಹನಗಳ ಓಡಾಟ ಆರಂಭವಾಗಲಿದೆ.
 
ಇನ್ನೊಂದೆ ವಾರದಲ್ಲಿ ಎಲ್ಲಾ ರೀತಿಯ ವಾಹನಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ಐಐಎಸ್ಸಿ ನೀಡಿದೆ.ಫೆಬ್ರುವರಿ ಮೊದಲ ವಾರದಿಂದಲ್ಲೇ ಎಲ್ಲಾ ವಾಹನಗಳು ಓಡಾಟ ನಡೆಸಬಹುದು ಎಂದು ಐಐಎಸ್ಸಿ ತಜ್ಞ ಚಂದ್ರ ಕಿಷನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ