ದೇಶದ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

ಬುಧವಾರ, 2 ಫೆಬ್ರವರಿ 2022 (20:47 IST)
ಇದು ವಿತ್ತ ಸಚಿವರ ನಾಲ್ಕನೇ ಬಜೆಟ್ ಆಗಿದ್ದು, ಕೋವಿಡ್ ಮೂರನೇ ಅಲೆಯ ಸಂದರ್ಭದಲ್ಲಿ ಮಂಡನೆಯಾಗುತ್ತಿರುವ ಈ ಬಜೆಟ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ . ಇದೇ ವೇಳೆ ಬಜೆಟ್ ಮಂಡನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು, ಕೊರೊನಾದಿಂದ ಆರೋಗ್ಯ ಮತ್ತು ಆರ್ಥಿಕ ತೊಂದರೆಯಾಗಿದೆ. ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಆಚರಿಸ್ತಿದ್ದೀವಿ. 2014ರಿಂದ ಜನರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯವಾಗಿದೆ. 2014 ರಿಂದ ನಾಗರಿನ್ನು ಸಶಕ್ತಗೊಳಿಸಲು ಯತ್ನಿಸಿದ್ದರು. 2022 ರಲ್ಲಿ ಆರ್ಥಿಕ ಬೆಳವಣಿಗೆ 9.2 ರಷ್ಟು ಬೆಳವಣಿಗೆಯಾಗಿದೆ ಎಂದು ಮಾಹಿತಿ ನೀಡಿದೆ.
 
ಕಾವೇರಿ ಪೆನ್ನಾರ್ ನದಿ, ಗೋದಾವರಿ-ಕೃಷ್ಣಾ ನದಿ ಜೋಡಣೆಗೆ ಕೇಂದ್ರ ಸಮ್ಮತಿ ನೀಡಲಾಯಿತು, ಮುಂದಿನ 25 ವರ್ಷಗಳಿಗೆ ಸರ್ಕಾರದ ಬ್ಲೂಪ್ರಿಂಟ್ ಸಿದ್ದವಾಗಿದೆ. ವಸತಿ, ಬಡವರ ಕಲ್ಯಾಣಕ್ಕೆ ಸರ್ಕಾರ ಅದ್ಯತೆ ನೀಡಲಿದೆ. 60 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಆಂತರಿಕವಾಗಿ 30 ಲಕ್ಷ ಹೆಚ್ಚುವರಿ ಉದ್ಯೋಗ ನೀಡಲಾಗುವುದು. ಕಲ್ಲಿದ್ದಲು ಕ್ಷೇತ್ರದಲ್ಲಿ 100 ವರ್ಷಗಳ ಅಭಿವೃದ್ಧಿ ಎಂದು ಹೇಳಿದರು.
ಕೊರನಾ ಕಾರಣದಿಂದ ಶಾಲೆಗಳು ಬಂದ್ ಆಗಿವೆ. 1 ರಿಂದ 12 ನೇ ತರಗತಿ ಮಕ್ಕಳಿಗೆ ಚಾನೆಲ್ ಒನ್ ಕ್ಲಾಸ್, ಆನ್ ಟಿವಿ ಜಾರಿಗೆ ತರಲಾಗುವುದು.ವಿಶ್ವದರ್ಜೆಯ ಡಿಜಿಟಲ್ ಯುನಿವರ್ಸಿಟಿ ಸ್ಥಾಪನೆ, ಹಳ್ಳಿಗಳ ಶಾಲೆಗಳ ಮಕ್ಕಳ ಶಿಕ್ಷಣಕ್ಕಾಗಿ ಪ್ರಧಾನ ಮಂತ್ರಿ ಇ-ವಿದ್ಯಾ ಯೋಜನೆ ಅಡಿಯಲ್ಲಿ 200 ಟಿವಿ ಚಾನೆಲ್ಗಳ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ