ಮೊದಲ ಬಾರಿಗೆ ಸ್ಟಾರ್ಟ್‌ ಅಪ್‌ ರಾಜಧಾನಿಯಾದ ದೆಹಲಿ

ಬುಧವಾರ, 2 ಫೆಬ್ರವರಿ 2022 (20:07 IST)
ಇದೇ ಮೊದಲ ಬಾರಿಗೆ ಬೆಂಗಳೂರನ್ನು ಹಿಂದಿಕ್ಕಿ ರಾಷ್ಟ್ರರಾಜಧಾನಿ ದೆಹಲಿ ದೇಶದ ಸ್ಟಾರ್ಟ್‌ ಅಪ್‌ ರಾಜಧಾನಿಯಾಗಿದೆ.
2021ರ ಆರ್ಥಿಕ ಸಮೀಕ್ಷೆಯ ವರದಿ ಪ್ರಕಾರ, 2021ರಲ್ಲಿ ದೆಹಲಿಯಲ್ಲಿ ಬರೋಬ್ಬರಿ 5 ಸಾವಿರ ಸ್ಟಾರ್ಟ್‌ ಅಪ್‌ ಗಳು ತಲೆ ಎತ್ತಿದ್ದು, ಬೆಂಗಳೂರಿನಲ್ಲಿ 4145 ಸ್ಟಾರ್ಟ್‌ ಅಪ್ ಗಳು ಸೇರಿಕೊಂಡಿವೆ.
ಒಟ್ಟು 11308 ಸ್ಟಾರ್ಟ್‌ ಅಪ್‌ ಗಳೊಂದಿಗೆ ಮಹಾರಾಷ್ಟ್ರ ಹೆಚ್ಚಿನ ಸಂಖ್ಯೆಯ ಮಾನ್ಯತೆಗೊಂಡಿರುವ ಸ್ಟಾರ್ಟ್‌ ಅಪ್‌ ಗಳಿವೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. 2022ರ ವೇಳೆಗೆ ದೇಶದಲ್ಲಿ 61400 ಸ್ಟಾರ್ಟ್‌ ಅಪ್‌ ಗಳು ದೇಶದಲ್ಲಿ ಗುರುತಿಸಿಕೊಂಡಿವೆ.
2016-17ರಲ್ಲಿ 733 ಸ್ಟಾರ್ಟ್ ಅಪ್ ಗಳಿಂದ 2021-22ರ ವೇಳೆಗೆ ದೇಶದಲ್ಲಿ ಸುಮಾರು 14,000 ಹೊಸ ಸ್ಟಾರ್ಟ್ ಗಳು ಬೆಳವಣಿಗೆಯಾಗುತ್ತಿವೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 75 ಸ್ಟಾರ್ಟ್ ಅಪ್ ಗಳು ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ