ಬಡವರ ಹಣ ಪೀಕುತ್ತಿರುವ ಸರಕಾರಿ ವೈದ್ಯೆ!
ವೈದ್ಯರನ್ನು ಈಗಿನ ಕಾಲದಲ್ಲಿ ಆರೋಗ್ಯವನ್ನು ಕಾಪಾಡುವ ದೇವರೆಂದು ನಂಬಿದ್ದಾರೆ. ಅದರಂತೆ ಸರಕಾರ ಬಡವರ ಆರೋಗ್ಯಕ್ಕಾಗಿ ಎಲ್ಲ ಬೇಕು, ಬೇಡ ಸೌಲಭ್ಯಗಳೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಎಲ್ಲವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗುವ ಹಾಗೆ ಮಾಡಿದೆ. ಆದರೆ ಕೆಲವು ಸರಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರು ಸರಕಾರ ತಮಗೆ ತಿಂಗಳ ಸಂಬಳ ತಪ್ಪದೆ ನೀಡುತ್ತಿದ್ದರೂ ಸಹ ಬಡವರು ಕೂಲಿ ನಾಲಿ ಮಾಡಿ ಬಂದ ಹಣಕ್ಕೆ ಬೆನ್ನು ಹತ್ತಿದ್ದಾರೆ.