ಬಾಣಂತಿ ಸಾವು: ಆಸ್ಪತ್ರೆಯಲ್ಲಿ ಸಂಬಂಧಿಕರಿಂದ ಪ್ರತಿಭಟನೆ

ಮಂಗಳವಾರ, 28 ಆಗಸ್ಟ್ 2018 (14:26 IST)
ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಘಟನೆ
ನಡೆದಿದೆ.

ಹುಬ್ಬಳ್ಳಿ ನಗರದ ಸಿಟಿ ಕ್ಲಿನಿಕ್ ಎದುರು ಈ ಘಟನೆ ನಡೆದಿದೆ. ಬಮ್ಮಾಪುರ ಓಣಿ ನಿವಾಸಿ ನಿಖಿತಾ ಭರತ್ ಗೋಟೆಕರ್ (23) ಎಂಬುವವರೇ ಮೃತ ಮಹಿಳೆ. ಹೆರಿಗೆಗೆಂದು ಸಿಟಿ ಕ್ಲಿನಿಕ್ ಗೆ ಆಸ್ಪತ್ರೆಗೆ ದಾಖಲಾಗಿದ್ದಳು. ಸಂಜೆ ಸಿಜೆರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು‌. ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದ್ರೆ ಹೆರಿಗೆ ನಂತರ ವಿಪರೀತ  ರಕ್ತಸ್ರಾವಾಗಿದೆ. 16 ಬಾಟಲ್ ರಕ್ತ ಬೇಕು ಎಂದಿದ್ದಾರೆ. ಮಹಿಳೆಯ ಸಂಬಂಧಿಗಳು ರಕ್ತವನ್ನು ತಂದು ಕೊಟ್ಟಿದ್ದಾರೆ. ಇಷ್ಟಾದ ಮೇಲೆ ರಾತ್ರಿಯೇ ನಿಖಿತಾ ಮೃತ ಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಆಗ ಮಹಿಳೆ ಸಂಬಂಧಿಗಳು ಗಲಾಟೆ ಮಾಡಿದ್ದಾರೆ. ಆಗ ಇಲ್ಲ ಇನ್ನು ಜೀವಂತವಾಗಿದ್ದಾಳೆ ಎಂದು ಐಸಿಯುನಲ್ಲಿ ಚಿಕಿತ್ಸೆ ನೀಡುವ ನಾಟಕ ಮಾಡಿದ್ದಾರೆ. ಕೊನೆಗೆ ಬೆಳಗಿನ ಜಾವ 4 ಗಂಟೆಗೆ ನಿಖಿತಾ ಮೃತ ಪಟ್ಟಿದ್ದಾಗಿ ಹೇಳಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ ಎಂದು ಮೃತಳ ಸಂಬಂಧಿಗಳು ದೂರಿದ್ದಾರೆ.

 ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಮಹಿಳೆ ಸಾವಿನ ಹಿಂದೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ಪರೀಶಿಲನೆ ನಡೆಸಿದ್ದಾರೆ. ಈ ಸಂಬಂಧ  ಉಪನಗರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ