ಗುತ್ತಿಗೆದಾರರ ವಿಷಯ ಕುರಿತು ಇತ್ತೀಚೆಗೆ ಮಾತಾಡುವವರನ್ನು ನೋಡಿದರೆ ಅದು ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಲಿ,ಅವರು ಮಾಡಿದ ಆರೋಪವನ್ನೇ ಕಾಂಗ್ರೆಸ್ ಎಲ್ಲ ಕಡೆಗೆ ಪ್ರಚಾರ ಮಾಡಿತು.ಆದರೆ ಯಾವುದೇ ದಾಖಲೆ ನೀಡಲಿಲ್ಲ.ಈಗ ಬೆಂಗಳೂರು ಗುತ್ತಿಗೆದಾರರು 15% ಆರೋಪ ಮಾಡುತ್ತಿದ್ದಾರೆ.ಈಗ ಆರೋಪಕ್ಕೆ ಕೆಂಪಣ್ಣ ದಾಖಲೆ ಕೇಳುತ್ತಿದ್ದಾರೆ.ಕಾಂಗ್ರೆಸ್ ಕೃಪಾಪೋಷಿತ ಗುತ್ತಿಗೆದಾರರು ಇವರು.ಈ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ.ಟ್ರಾನ್ಸ್‌ಫರ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ, ಇದು ಜನವಿರೋಧಿ ಸರ್ಕಾರ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇನ್ನೂ ಪಕ್ಷಾಂತರ ಬಗ್ಗೆ ಮುನಿರತ್ನ ನಿವೃತ್ತಿ ಆಗುತ್ತೇನೆ ಹೊರತು ಕಾಂಗ್ರೆಸ್ ಸೇರಲ್ಲ ಎಂದಿದಾರೆ.ಮುನಿರತ್ನ ರೀತಿಯಲ್ಲೇ ಎಲ್ಲ ಶಾಸಕರೂ ಇದ್ದಾರೆ.ಬಿಜೆಪಿಯಲ್ಲಿ ಅವರಿಗೆ ಗೌರವ ಸಿಕ್ಕಿದೆ, ಮಂತ್ರಿಯನ್ನೂ ಮಾಡಲಾಗಿದೆ.ಕಾಂಗ್ರೆಸ್ ಮುಳುಗುವ ಹಡಗು.ಅದು ಯಾವಾಗ ಮುಳುಗುತ್ತೆ ಗೊತ್ತಿಲ್ಲ.ಸಮುದ್ರದಲ್ಲಿ ಇವರು ಕಳೆದುಹೋಗುವ ಪರಿಸ್ಥಿತಿ ಇದೆ.ಯಾರೂ ಕಾಂಗ್ರೆಸ್ ಗೆ ಹೋಗಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.