7 ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಸರಕಾರದ ನಿರ್ಧಾರ

ಶುಕ್ರವಾರ, 4 ಅಕ್ಟೋಬರ್ 2019 (17:25 IST)
ರಾಜ್ಯ ಸರಕಾರ 7ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಯನ್ನು ಪ್ರಸಕ್ತ ವರ್ಷದಿಂದಲೇ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.

ಈ ಹಿಂದೆ ಏಳನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಜಾರಿಯಲ್ಲಿತ್ತು. ಗುಣಮಟ್ಟದ ಶಿಕ್ಷಣದ ಆಶಯದೊಂದಿಗೆ ಮತ್ತೆ ಈ ಸಲದಿಂದ ಪಬ್ಲಿಕ್ ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ. ಹೀಗಂತ  ಶಿಕ್ಷಣ ಸಚಿವ ಸುರೇಶ್ ಕುಮಾರ ಹೇಳಿದ್ದಾರೆ.

1 ರಿಂದ 10 ನೇ ತರಗತಿ ವರೆಗೆ ಮಕ್ಕಳಿಗೆ ಫೇಲ್ ಮಾಡಬಾರದು ಅನ್ನೋ ನಿಯಮವನ್ನು ಸಹ ಸರಕಾರ ಬದಲಾವಣೆ ಮಾಡಿದೆ.
7ನೇ ತರಗತಿ ಮಕ್ಕಳಿಗೆ ಮಾರ್ಚ್ ನಲ್ಲಿ ಪಬ್ಲಿಕ್ ಎಕ್ಸಾಮ್ ನಡೆಯಲಿವೆ ಎಂದಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ