ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಾಪಿ ಹೊಡೆಯಬಾರದೆಂದು ಶಿಕ್ಷಕಿ ಮಾಡಿದ್ದೇನು ಗೊತ್ತಾ?

ಶುಕ್ರವಾರ, 6 ಸೆಪ್ಟಂಬರ್ 2019 (11:34 IST)
ಮೆಕ್ಸಿಕೊ: ಪರೀಕ್ಷೆಯಲ್ಲಿ ಮಕ್ಕಳು ಕಾಪಿ ಮಾಡಬಾರದೆಂದು ಶಿಕ್ಷಕಿಯೊಬ್ಬಳು ವಿದ್ಯಾರ್ಥಿಗಳಿಗೆ ಮಾಡಿದ ರೀತಿಯನ್ನು ನೋಡಿ ಪೋಷಕರು ಶಾಕ್ ಆಗಿದ್ದಾರೆ.ಹೆಚ್ಚಾಗಿ  ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯುತ್ತಾರೆ. ಇದನ್ನು ತಪ್ಪಿಸಲು ಕೇಂದ್ರ ಮೆಕ್ಸಿಕೋದ ಟ್ಲಾಕ್ಸ್‌ಕಾಲಾ ಎಂಬ ರಾಜ್ಯದ ಬಾಚಿಲ್ಲೆರ್ಸ್‌ 01 ಎಲ್ ಸಬಿನಲ್‌ ಶಾಲೆಯಲ್ಲಿ ಲೂಯಿ ಝುವಾರೆಝ್ ಟೆಕ್ಸಿಸ್ ಎಂಬ ಶಿಕ್ಷಕಿ ಮಕ್ಕಳ ತಲೆಗೆ ಕಾರ್ಡ್‌ಬೋರ್ಡ್‌ ಹಾಕಿದ್ದಾಳೆ.


ಈ ವಿಡಿಯೋ ಸಾಮಾಜಿಕ ಜಾಲತಾಣಗಳ್ಲಲಿ ವೈರಲ್ ಆಗಿದ್ದು, ಶಿಕ್ಷಕಿಯ ವರ್ತನೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಿಕ್ಷಕಿಯನ್ನು ಶಾಲೆಯ ಆಡಳಿತ ಅಮಾನತುಗೊಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ