ಕೃಷಿ ಕಾರ್ಮಿಕರಿಗೆ ವಿದೇಶಿ ಪ್ರವಾಸದ ಭಾಗ್ಯ...

ಮಂಗಳವಾರ, 4 ಅಕ್ಟೋಬರ್ 2016 (16:45 IST)
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉಪಯೋಜನೆ ಅಡಿಯಲ್ಲಿ ರಾಜ್ಯದ ರೈತ ಕಾರ್ಮಿಕರನ್ನು ಕೃಷಿ ಅಧ್ಯಯನಕ್ಕಾಗಿ ಚೀನಾ ಹಾಗೂ ಇಸ್ರೇಲ್ ಪ್ರವಾಸಕ್ಕೆ ಕಳುಹಿಸಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶದಲ್ಲಿರೋ ಕೃಷಿ ಮಾದರಿ ಅಧ್ಯಯನಕ್ಕಾಗಿ ಕೃಷಿ ಕಾರ್ಮಿಕರನ್ನು ಮಾರ್ಚ್ ಅಂತ್ಯದೊಳಗೆ ಚೀನಾ ಹಾಗೂ ಇಸ್ರೇಲ್ ರಾಷ್ಟ್ರಕ್ಕೆ ಕಳುಹಿಸಲಾಗುತ್ತಿದ್ದು, ಒಟ್ಟು 25 ಕೋಟಿ ರೂಪಾಯಿ ವೆಚ್ಚದಲ್ಲಿ 2500 ಕೃಷಿಕರನ್ನು ಕಳುಹಿಸುವುದಾಗಿ ಹೇಳಿದರು. 
 
ವಿದೇಶದಲ್ಲಿನ ಆಧುನಿಕ ಕೃಷಿ ತಂತ್ರಜ್ಞಾನದ ಕುರಿತು ತಿಳಿಯಲು ಪ್ರವಾಸ ಆಯೋಜಿಸಲಾಗಿದೆ. ಅಧ್ಯಯನದ ನಂತರ ಚೀನಾ ತಂತ್ರಜ್ಞಾನದ ಆಧುನಿಕ ಕೃಷಿ ಮಾದರಿಯನ್ನು ರಾಜ್ಯದಲ್ಲಿ ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
 
ಅಧ್ಯಯನ ಕೈಗೊಳ್ಳುವ ರೈತರು ಭೂ ರಹಿತರಾಗಿದ್ದರೇ ಅವರಿಗೆ ಸರಕಾರದಿಂದ ಭೂಮಿ ನೀಡಲಾಗುತ್ತೆ. ಈ ಯೋಜನೆ ಅಡಿಯಲ್ಲಿ 19,542 ಕೋಟಿ ರೂಪಾಯಿ ಹಣ ಇದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ