ಶಕ್ತಿ ಯೋಜನೆಗೆ ಶಕ್ತಿ ತುಂಬಲು ಮುಂದಾದ ಸರ್ಕಾರ

ಮಂಗಳವಾರ, 18 ಜುಲೈ 2023 (15:30 IST)
ಶಕ್ತಿ ಯೋಜನೆ ಜಾರಿಯಾದ ದಿನದಿಂದ ಬಸ್ ನಲ್ಲಿ ಓಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದಾಗಿ ಬಸ್ ಗಳಲ್ಲಿ ನಿಂತುಕೊಳ್ಳೋಕ್ಕೆ ಜಾಗ ಸಿಗದಂತಾಗಿ ಜನ ಪರದಾಡುವಂತಾಗಿದೆ. ಹೀಗಾಗಿ ದಿನ ನಿತ್ಯ ಓಡಾಡುವ ಜನರು ಸರ್ಕಾರವಿದ್ದ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ  ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.

ಸರ್ಕಾರ ಇದೀಗ 4 ಸಾವಿರ ಬಸ್ ಖರೀದಿ ಮಾಡಲು ಮುಂದಾಗಿದ್ದು, ಅದರಲ್ಲಿ ಎರಡು ಸಾವಿರ ಬಸ್ಗಳನ್ನು ಬಿಎಂಟಿಸಿಗೆ ನೀಡಲಾಗುವುದು ಇನ್ನೇರಡು 2 ಸಾವಿರ ಬಸ್ಗಳು KSRTCಗೆ  ನಿಡಲಾಗುವುದು, ಇದರಿಂದ ಪ್ರಯಾಣಿಕರ ದಟ್ಟಣೆ ಇಳಿಕೆಯಾಗಲಿದೆ ಹಾಗೂ ರದ್ದುಗೊಂಡಿರುವ ಮಾರ್ಗಗಳಲ್ಲಿ ಬಸ್ಗಳು ಪುನಃ ಸಂಚರಿಸಲಿವೆ. ಇದೀಗ ಸಾರಿಗೆ ಇಲಾಖೆ ಹೊಸ್ ಬಸ್ಗಳ ಖರಿದೀಗೆ ಮುಂದಾಗಿದ್ಗದು  ಒಂದು ಹೊಸ ಬಸ್ ಖರೀದಿ ಮಾಡಲು ಅಂದಾಜು 40 ಲಕ್ಷ ರೂಪಾಯಿ ಹಣ ಬೇಕಾಗುತ್ತದೆ. ಅದೇ ಹಳೇ ಬಸ್ ನವೀಕರಣ ಮಾಡಲು 3 ಲಕ್ಷ ಖರ್ಚು ಆಗಲಿದೆ.  ಬಸ್ಗಳ ನವೀಕರಣದಿಂದ ನಿಗಮಕ್ಕೆ ಒಂದು ವಾಹನದಿಂದನ 37 ಲಕ್ಷ ರೂಪಾಯಿ ಉಳಿತಾಯ ಆಗಲಿದೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಒಂದೂ ಸರ್ಕಾರಿ ವಾಹನದ ಜೀವಿತಾವಧಿ 15 ವರ್ಷ ಆಗಿದೆ. ಆದ್ರೆ ನಿಗಮಗಳ ವ್ಯಾಪ್ತಿಯಲ್ಲಿರುವ ಬಸ್ ಗಳು 10 ವರ್ಷಕ್ಕೆ ಗುಜರಿಗೆ ಸೇರುತ್ತಿ.ವೆ. ಈ ಹಿನ್ನಲೆ ಇವುಗಳ ನವೀಕರಣ ಮಾಡಿ ಉಳಿದ 5 ವರ್ಷ ರನ್ ಮಾಡುವ ಲೆಕ್ಕಾಚಾರವನ್ನು ಸಾರಿಗೆ ನಿಗಮ ಮಾಡುತ್ತಿದೆ. ಇನ್ನೂ ಮಾರ್ಚ್ನಲ್ಲಿ 500 ಹೊಸ ಎಲೆಕ್ಟ್ರಿಕ್ ಬಸ್ಗಳನ್ನ ಪರಿಚಯಿಸಲು ಸರ್ಕಾರ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ