ಮದ್ಯಪಾನ ನಿಷೇಧಿಸಿದ್ದಕ್ಕೆ ಸರಕಾರದಿಂದ ಅಧ್ಯಯನ?

ಬುಧವಾರ, 15 ಏಪ್ರಿಲ್ 2020 (17:13 IST)
ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಇದೇ ಸಮಯದಲ್ಲಿ ಸರಕಾರದಿಂದ ಮದ್ಯಪಾನಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಬೇಕಂತೆ.

ಮದ್ಯಪಾನಕ್ಕೆ ಸಂಬಂಧಿಸಿದ ಎಲ್ಲಾ ಆಯಾಮಗಳ ಕುರಿತು ಸರ್ಕಾರದ ವತಿಯಿಂದ ಸಮಗ್ರ ಮತ್ತು ಆಳವಾದ ಅಧ್ಯಯನವನ್ನು ತಜ್ಞರಿಂದ ನಡೆಸುವಂತಾಗಬೇಕು. ಹೀಗಂತ ಕಾರವಾರದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಸುದೀರ್ಘ ಪತ್ರ ಬರೆದಿರುವ ಸಚ್ಚಿದಾನಂದ ಹೆಗಡೆ, ಮದ್ಯಪಾನದ ಬಗ್ಗೆ ಅಧ್ಯಯನ ಆಧಾರಿತ ಧೋರಣೆ ರೂಪಿಸಲು ಇದು ಸಕಾಲ. ಸರ್ಕಾರ ಜನರ ಜೀವಕ್ಕೆ ಬೆಲೆ ಕೊಟ್ಟು ಮಾರಾಟ ತೆರಿಗೆಯಂತಹ ಬಹುಮುಖ್ಯ ಆದಾಯದ ಮೂಲವನ್ನೇ ಬಿಟ್ಟುಕೊಟ್ಟಿದೆ. ಇದೇ ತತ್ವವನ್ನು ಮದ್ಯಪಾನದ ವಿಷಯದಲ್ಲೂ ಅಳವಡಿಸುವುದು ಜನಹಿತಕಾರಿ. ಹೀಗಾಗಿ ಈ ಬಗ್ಗೆ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಲಿ ಎಂದು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ