ಇನ್ಮುಂದೆ ಸಿಗರೇಟ್ ಸೇದೋಕೂ ಇಷ್ಟು ವರ್ಷ ಕಡ್ಡಾಯ!

ಶುಕ್ರವಾರ, 31 ಮೇ 2019 (09:34 IST)
ಬೆಂಗಳೂರು: ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಎಷ್ಟೇ ಹೇಳಿದರೂ ಯುವ ಸಮೂಹ ಈ ಹಾಳು ವ್ಯಸನಕ್ಕೆ ಅಂಟಿಕೊಳ್ಳುತ್ತಾರೆ. ಈಗ ತಂಬಾಕು ಪದಾರ್ಥ ಸೇವನೆಗೆ 18 ವರ್ಷ ಪ್ರಾಯಮಿತಿಯಿದೆ.


ಆದರೆ ಇದನ್ನು 21 ವರ್ಷಕ್ಕೆ ಏರಿಕೆ ಮಾಡಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಅಂದರೆ ಇನ್ನು ಮುಂದೆ ಸಿಗರೇಟು ಸೇರಿದಂತೆ ತಂಬಾಕು ಪದಾರ್ಥ ಸೇವನೆ ಮಾಡಲು ಒಬ್ಬ ವ್ಯಕ್ತಿಗೆ 21 ವರ್ಷ ಪ್ರಾಯ ಪೂರ್ತಿಯಾಗಿರಬೇಕು.

ಈಗಾಗಲೇ ಸರ್ಕಾರ ತಂಬಾಕು ನಿಯಂತ್ರಣ ಪ್ರಾಧಿಕಾರದೊಂದಿಗೆ ಸಮಾಲೋಚನೆ ನಡೆಸಿದ್ದು, ಸದ್ಯದಲ್ಲೇ ಈ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ