ನವದೆಹಲಿ: ದೇಶದಲ್ಲಿ ಕೊರೋನಾ ವ್ಯಾಕ್ಸಿನೇಷನ್ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಹಾಗಿದ್ದರೂ ಇದುವರೆಗೆ ಲಸಿಕೆ ಹಾಕಿಸಿಕೊಂಡವರಲ್ಲಿ ಪುರುಷರೇ ಮೇಲುಗೈ ಸಾಧಿಸಿದ್ದಾರೆ.
ಕೇಂದ್ರ ಸರ್ಕಾರದ ಅಂಕಿ ಅಂಶಗಳೇ ಇದನ್ನು ಸಾರಿ ಹೇಳಿವೆ. ಲಸಿಕೆ ಸ್ವೀಕರಿಸಿದವರ ಪೈಕಿ ಶೇ. 54 ರಷ್ಟು ಪುರುಷರು ಇದ್ದರೆ, ಮಹಿಳೆಯರು ಶೇ. 17 ರಷ್ಟು ಕಡಿಮೆ ಮಂದಿ ಲಸಿಕೆ ಪಡೆದಿದ್ದಾರೆ. ಪುರುಷರು ಉದ್ಯೋಗಕ್ಕೆ ಹೋಗುವ ಕಾರಣ ಹೆಚ್ಚು ಮುತುವರ್ಜಿ ವಹಿಸಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಇತ್ತ ಮಹಿಳೆಯರು ಲಸಿಕೆ ಪಡೆದುಕೊಳ್ಳುವುದರಿಂದ ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂಬಿತ್ಯಾದಿ ತಪ್ಪು ಕಲ್ಪನೆಗಳಿಂದಲೇ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಇನ್ನು, ಜಮ್ಮು ಕಾಶ್ಮೀರದ ಬಂಡಿ ಪೊರೋಆ ಜಿಲ್ಲೆಯ ವೆಯಾನ್ ಗ್ರಾಮ ದೇಶದಲ್ಲಿ ಶೇ.100 ರಷ್ಟು ಲಸಿಕೆ ಪಡೆದ ಹಳ್ಳಿ ಎಂಬ ಖ್ಯಾತಿಗಳೊಗಾಗಿದೆ. ಮುಂದೊಂದು ದಿನ ಕೇಂದ್ರವೇ ಮನೆ ಮನೆಗೆ ತೆರಳಿ ಲಸಿಕೆ ಅಭಿಯಾನ, ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಚಾಲನೆ ನೀಡಿದರೂ ಅಚ್ಚರಿಯಿಲ್ಲ.