ಬೇರೆ ಊರಲ್ಲಿದ್ದವರಿಗೆ ಬಸ್ ವ್ಯವಸ್ಥೆ ಮಾಡೋದಿಲ್ಲ ಎಂದ ಸರಕಾರ
ವಲಸೆ ಹೋಗಿರುವ ಕಾರ್ಮಿಕರಿಗೆ ಸರಕಾರದಿಂದ ಸಾರಿಗೆ ವ್ಯವಸ್ಥೆ ಮಾಡೋದಿಲ್ಲ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ.
ಸರಕಾರದ ಮಾರ್ಗಸೂಚಿಯಂತೆ ವಲಸೆ ಹೋದವರು ರಾಜ್ಯಕ್ಕೆ, ಜಿಲ್ಲೆಗಳಿಗೆ ಬರಬಹುದು. ಆದರೆ ಅಲ್ಲಿಂದ ಬರುವ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡೋದಿಲ್ಲ. ಆದರೆ ಒಂದೇ ಸ್ಥಳಕ್ಕೆ ಬಹಳಷ್ಟು ಕಾರ್ಮಿಕರು ಬರುತ್ತಿದ್ದರೆ ಅಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲು ಸರಕಾರ ನಿರ್ಧರಿಸಿದೆ. ಆದರೆ ಕಾರ್ಮಿಕರೇ ಟಿಕೆಟ್ ಕೊಂಡುಕೊಳ್ಳಬೇಕು ಎಂದಿದ್ದಾರೆ.
ಬೇರೆ ಜಿಲ್ಲೆ, ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಬೇಕು ಎಂದು ಅಧಿಕಾರಿಗಳಿಗೆ ಡಿಸಿಎಂ ಸೂಚನೆ ಕೊಟ್ಟಿದ್ದಾರೆ.