ಯೂ-ಟ್ಯೂಬ್ ನೋಡಿ ದರೋಡೆಗೆ ಮುಂದಾದ ಪದವೀಧರ ಗೆಳೆಯ, ಗೆಳತಿ
ಗುರುವಾರ, 23 ಮಾರ್ಚ್ 2017 (15:30 IST)
ಯೂ-ಟ್ಯೂಬ್ ನೋಡಿ ಮನೆ ದರೋಡೆಗೆ ಮುಂದಾದ ಪದವೀಧರ ಗೆಳೆಯ, ಗೆಳತಿ ಪೊಲೀಸರ ಬಲೆಗೆ ಸಿಕ್ಕು ಬಿದ್ದಿದ್ದಾರೆ.
ಆರೋಪಿಯಾದ ಯುವತಿ ಇಂಜಿನಿಯರ್ ಪದವೀಧರೆಯಾಗಿದ್ದು, ಯತೀಶ್ ಪೋಸ್ಟ್ ಗ್ರ್ಯಾಜುಯೇಟ್ ಎನ್ನಲಾಗಿದೆ. ಹಣದ ಬರವನ್ನು ನೀಗಿಸಲು ದರೋಡೆಗೆ ಮುಂದಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಟ್ಟಣದ ಮುನೇಶ್ವರ್ ನಗರದಲ್ಲಿರುವ ಸುರೇಶ್ ಮತ್ತು ಲಕ್ಷ್ಮಿ ದಂಪತಿಗಳ ಮನೆಯ ಮುಂದೆ ಹಾಕಿದ ಬಾಡಿಗೆಗೆ ಖಾಲಿಯಿದೆ ಎನ್ನುವ ಬೋರ್ಡ್ ನೋಡಿದ ಆರೋಪಿಗಳು, ಮನೆಯೊಳಗೆ ತೆರಳಿ ಬಾಡಿಗೆಗೆ ಮನೆ ಬೇಕಾಗಿದೆ ಎಂದು ಮನೆಯೊಡತಿಯನ್ನು ಕೇಳಿದ್ದಾರೆ.
ಒಂದು ಬಾರಿ ಮನೆಯನ್ನು ಪರಿಶೀಲಿಸಿದ ಆರೋಪಿಗಳು, ಮನೆಯೊಡತಿ ಕೈಗೆ ಎರಡು ಸಾವಿರ ಅಡ್ವಾನ್ಸ್ ಕೂಡಾ ನೀಡಿದ್ದಾರೆ. ನಂತರ ಇಬ್ಬರು ಸೇರಿ ಮನೆಯೊಡತಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಆಕೆ ಕಿರುಚಿಕೊಂಡಿದ್ದಾಳೆ.
ಮನೆಯೊಡತಿ ಕಿರುಚಿದ ಶಬ್ದ ಕೇಳಿ ನೆರೆಹೊರೆಯವರು ಮನೆಯೊಳಗೆ ಬಂದು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.