ಪ್ರಗತಿಪರ ಚಿಂತಕ ಕೆ.ಎಸ್.ಭಗವಾನ್ ಅವರಿಗೆ ಚುನಾವಣೆ ನಾಮಪತ್ರ ಸಲ್ಲಿಕೆ ಮಾಡದಂತೆ, ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿದ್ದರಂತೆ. ಆದರೆ ಇದು ನನ್ನ ಮೊದಲ ಹಾಗೂ ಕೊನೆಯ ಚುನಾವಣೆ ಹಾಗಾಗಿ ನನ್ನನ್ನು ಬೆಂಬಲಿಸಿ ಎಂದು ಅವರಲ್ಲಿ ಕೇಳಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಪದವೀಧರರ 4 ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಪ್ರಗತಿಪರ ಚಿಂತಕ ಕೆ.ಎಸ್.ಭಗವಾನ್ ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ಬಿಜಿಪಿ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ "ದೇವರನ್ನು ದೆವ್ವಗಳೇ ಕಾಪಾಡಬೇಕು" ಹೇಳಿಕೆಗೆ ಪ್ರತಿಕ್ರಿಯಿಸಿದ ಭಗವಾನ್, ಪದವೀಧರ ಮತದಾರರನ್ನು ದೆವ್ವಕ್ಕೆ ಹೋಲಿಸಿ ಮಧುಸೂದನ್ ಅವಮಾನಿಸಿದ್ದಾರೆ ಎಂದು ತೀರುಗೇಟು ನೀಡಿದ್ದಾರೆ.