ರೈಲು ಸಂಚಾರಕ್ಕೆ ಹಸಿರು ನಿಶಾನೆ

ಶನಿವಾರ, 25 ಜೂನ್ 2022 (11:25 IST)
ತುಮಕೂರು : ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ತುಮಕೂರು – ತಿಪಟೂರು – ಅರಸೀಕೆರೆ ಹಾಗೂ ತುಮಕೂರು – ಯಶವಂತಪುರ – ಬಾಣಸವಾಡಿ ನಡುವೆ ಹೊಸದಾಗಿ ಪ್ಯಾಸೆಂಜರ್ ರೈಲು ಸಂಚಾರ ಜೂನ್ 20ರಿಂದ ಆರಂಭವಾಗಲಿದೆ.

ನವದೆಹಲಿಯ ರೈಲ್ವೆ ಮಂಡಳಿ ಅಧ್ಯಕ್ಷ ವಿನಯ್ ಕುಮರ್ ತ್ರಿಪಾಠಿ ಅವರನ್ನು ಸಂಸದ ಜಿಎಸ್ ಬಸವರಾಜು ಭೇಟಿ ಮಾಡಿ ಚರ್ಚಿಸಿದ್ದಾರೆ. 

ಹೊಸದಾಗಿ ಎರಡು ರೈಲುಗಳ ಸಂಚಾರ ಆರಂಭಿಸುವ ಭರವಸೆಯನ್ನು ರೈಲ್ವೆ ಮಂಡಳಿ ಅಧಿಕಾರಿಗಳು ನೀಡಿದ್ದಾರೆ. ಜೂನ್ 20ರಂದು ನಗರದ ರೈಲು ನಿಲ್ದಾಣದಲ್ಲಿ ನೂತನ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ