ವಿರೋಧಿಗಳು ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ : ಈಶ್ವರಪ್ಪ

ಸೋಮವಾರ, 20 ಜೂನ್ 2022 (12:31 IST)
ಶಿವಮೊಗ್ಗ : ಅಗ್ನಿಪಥ್ ಯೋಜನೆ ವಿರೋಧಿಗಳು ಕೇವಲ ರೈಲು ಸುಟ್ಟಿಲ್ಲ, ಇಡಿ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ.
 
ಕಾಂಗ್ರೆಸ್ನವರು ಯುವಕರು ಭಯೋತ್ಪಾದಕರ ರೀತಿ ಆಗುತ್ತಾರೆ ಅಂದಿದ್ದಾರೆ. ನಮ್ಮ ದೇಶದ ಯುವಕರು ಭಯೋತ್ಪಾದಕರಾಗುವುದಿಲ್ಲ. ಕಾಂಗ್ರೆಸ್ನವರು ಭಯೋತ್ಪಾದಕರನ್ನಾಗಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆ ಕೇವಲ ನಮ್ಮ ದೇಶದಲ್ಲಿ ಮಾತ್ರ ಇಲ್ಲ. ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಈ ಯೋಜನೆ ಇದೆ.

ಅಗ್ನಿಪಥ್ ವಿಚಾರ ತಿರುಚಿ ನಿರುದ್ಯೋಗ ಯುವಕರನ್ನು ಕಾಂಗ್ರೆಸ್ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಇದರ ಹಿಂದೆ ಕಾಂಗ್ರೆಸ್ ನೇತೃತ್ವ ಇದ್ದರೆ ಅದನ್ನು ತಡೆಯುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ