ಬಸ್, ಲಾರಿ ಸಂಚಾರಕ್ಕಿಲ್ಲ ಗ್ರೀನ್ ಸಿಗ್ನಲ್
ರಾಜ್ಯದ 18 ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪೀಣ್ಯ ಫ್ಲೈ ಓವರ್ನಲ್ಲಿ ಬಸ್ ಮತ್ತು ಲಾರಿ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.. ಭಾರತೀಯ ವಿಜ್ಞಾನ ಸಂಸ್ಥೆಯು ಮೇಲ್ಸೇತುವೆ ಗುಣಮಟ್ಟದ ಬಗ್ಗೆ ವರದಿ ನೀಡಿದೆ.. ಪಿಲ್ಲರ್ಗಳ ನಡುವೆ ಅಳವಡಿಸಿರುವ ಕೇಬಲ್ಗಳನ್ನು ಬದಲಿಸಿ, ಇನ್ನಷ್ಟು ಹೆಚ್ಚುವರಿ ಕೇಬಲ್ಗಳನ್ನು ಅಳವಡಿಕೆ ಮಾಡುವಂತೆ ಭಾರತೀಯ ವಿಜ್ಞಾನ ಸಂಸ್ಥೆ ಸೂಚನೆಯನ್ನು ನೀಡಿದೆ.. ಹೀಗಾಗಿ ಇನ್ನಷ್ಟು ದಿನ ಈ ಮೇಲ್ಸೇತುವೆ ಮೇಲಿನ ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್ ಬಿದ್ದಿದೆ.. ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 5 ಕಿಲೋ ಮೀಟರ್ ಉದ್ದ ನಿರ್ಮಿಸಿರುವ ಮೇಲ್ಸೇತುವೆ ಇದಾಗಿದೆ.. IISC ತಜ್ಞರ ಸಲಹೆಯಂತೆ ಹೆಚ್ಚುವರಿ ಕೇಬಲ್ ಅಳವಡಿಸಲು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ ಮಾಡಿದೆ.