ಕರ್ನಾಟಕ ರಾಜ್ಯ ಪೊಲೀಸ್‌ (ಡಿಸಿಪ್ಲಿನರಿ ಪ್ರೊಸಿಡಿಂಗ್ಸ್‌) ತಿದ್ದುಪಡಿ ಗ್ರೀನ್ ಸಿಗ್ನಲ್ ಬಹುತೇಕ ಪಕ್ಕ

ಮಂಗಳವಾರ, 20 ಸೆಪ್ಟಂಬರ್ 2022 (17:44 IST)
ಕರ್ನಾಟಕ ರಾಜ್ಯ ಪೊಲೀಸ್‌ (ಡಿಸಿಪ್ಲಿನರಿ ಪ್ರೊಸಿಡಿಂಗ್ಸ್‌) ತಿದ್ದುಪಡಿ ನಿಯಮ-2022ರ ಕರಡನ್ನು ಸರ್ಕಾರ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳನ್ನೂ ಆಹ್ವಾನಿಸಿದೆ.
 
ತಪ್ಪಿತಸ್ಥ ಸಿಬ್ಬಂದಿಗೆ ವಿಧಿಸಲಾಗುವ ದಂಡನೆಯು, ನಿಯಮ 4 'ಎ' ಮತ್ತು ಅದರ ಉಪನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ದಂಡನೆಯಾಗಿದ್ದಲ್ಲಿ ಯಾವುದೇ ಮೇಲ್ಮನವಿಯನ್ನು ಸಲ್ಲಿಸಲು ಅವಕಾಶವಿಲ್ಲ ಎಂದು ಕರಡು ಪ್ರತಿಯಲ್ಲಿ ನಮೂದಿಸಲಾಗಿದೆ.
 
ನಿಯಮ ಜಾರಿಯಾದಲ್ಲಿ ಇನ್ನು ಮುಂದೆ ಆಪಾದಿತ ಸಿಬ್ಬಂದಿಯು ತಮ್ಮ ಇನ್‌ಕ್ರೀಮೆಂಟ್‌ ಮತ್ತು ಬಡ್ತಿ ತಡೆಹಿಡಿದಾಗ ಮನವಿ ಸಲ್ಲಿಸುವಂತಿಲ್ಲ.
 
ಸರ್ಕಾರಗಳಿಗೆ ಅಧಿಕಾರಿಯ ಸೇವೆಗಳನ್ನು ಹೊಂದಿರುವ ವ್ಯಕ್ತಿ, ಸಂಸ್ಥೆ ಅಥವಾ ಪ್ರಾಧಿಕಾರಕ್ಕೆ ನಿರ್ಲಕ್ಷ್ಯ ಅಥವಾ ಆದೇಶಗಳ ಉಲ್ಲಂಘನೆ ಮಾಡಿದರೆ ಉಂಟಾದ ಆರ್ಥಿಕ ನಷ್ಟದ ಸಂಪೂರ್ಣ ಅಥವಾ ಭಾಗಶಃ ವಸೂಲಾತಿ ಮಾಡಲಾಗುತ್ತದೆ. ಅಂತಹ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.
 
'ಮೇಲಧಿಕಾರಿಗಳು ವಿವೇಚನಾ ಅಧಿಕಾರವನ್ನು ಬಳಸದೇ ಪೂರ್ವಗ್ರಹ ಪೀಡಿತರಾಗಿ, ಯಾರದೋ ಮಾತನ್ನು ಕೇಳಿ ಮನಸಿಗೆ ಬಂದಹಾಗೆ ಶಿಸ್ತು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಹೆಚ್ಚಾಗಿದೆ. ಈ ರೀತಿಯ ಧೋರಣೆಯನ್ನು ಮೇಲ್ಮನವಿ ಸಲ್ಲಿಸುವ ಮೂಲಕ ಪ್ರಶ್ನಿಸಿ, ನ್ಯಾಯ ಪಡೆಯುತ್ತಿದ್ದೆವು. ಹೊಸ ನಿಯಮ ಜಾರಿಗೆ ಬಂದರೆ ಹಕ್ಕಿನಿಂದ ವಂಚಿತರಾಗಲಿದ್ದೇವೆ'

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ