ಮನೆಯಿಂದ ಬುಟ್ಟಿ, ಚೀಲ, ಮನೆಯಲ್ಲಿದ್ದ ಪಾತ್ರೆ, ಪ್ಲಾಸ್ಟಿಕ್ ಕವರ್ ಹಿಡಿದು ಬಂದ ಜನರು ನಾ ಮುಂದು, ತಾ ಮುಂದು ಅಂತ ಬೀಚ್‌ನಲ್ಲಿ ಬಿದ್ದಿದ್ದ ಮೀನುಗಳನ್ನು ತುಂಬಿ ಕೊಳ್ಳುತ್ತಿದ್ದರು. ಇನ್ನು ಕೆಲವರು ಏನದು ನೋಡುವಾ ಅಂತ ಬಂದವರು ಕೈಯಲ್ಲಿ ಸಿಕ್ಕಿದಷ್ಟು ಮೀನುಗಳನ್ನು ಹಿಡಿದುಕೊಳ್ಳುತ್ತಿದ್ದರು. ಕೊನೆಗೆ ರಾಶಿ ರಾಶಿ ಮೀನುಗಳನ್ನು ಮನೆಗೆ ತೆಗೆದುಕೊಂಡು ಹೋದರು.
100-200 ಮೀಟರ್ ಉದ್ದಕ್ಕೂ ತೀರಕ್ಕೆ ಬೂತಾಯಿ ಮೀನು ಅಪ್ಪಳಿಸಿದ್ದವು. ಸುಮಾರು 500ರಿಂದ 600 ಕೆ.ಜಿ.ಗೂ ಅಧಿಕ ಬೂತಾಯಿ ಮೀನು ದಡದಲ್ಲಿ ರಾಶಿ ಬಿದ್ದಿದ್ದವು. ಈ ಮೀನುಗಳನ್ನು ಕಡಲ ಸಮೀಪದ ನಿವಾಸಿಗಳು, ಮೀನುಗಾರರು ಹೆಕ್ಕಲು ಮುಗಿ ಬಿದ್ದಿದ್ದು, ಮನೆಗೆ ತೆಗೆದುಕೊಂಡು ಹೋಗಿದ್ದಾರೆ.