ಗೃಹಲಕ್ಷ್ಮಿ ಹಣ ಹಾಕಿ ಎಂದಿದ್ದಕ್ಕೆ ಸರ್ಕಾರ ಹೀಗೆ ಮಾಡೋದಾ, ಮಹಿಳೆಯರ ಆಕ್ರೋಶಕ್ಕೆ ಕಾರಣವೇನು

Krishnaveni K

ಮಂಗಳವಾರ, 15 ಅಕ್ಟೋಬರ್ 2024 (09:41 IST)
Photo Credit: X
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಬಂದಿದೆ. ಆದರೆ ಅದನ್ನು ನೋಡಿ ಮಹಿಳೆಯರು ಸಿಟ್ಟಾಗಿದ್ದಾರೆ. ಅವರ ಆಕ್ರೋಶಕ್ಕೆ ಕಾರಣವೇನು ಗೊತ್ತಾ?

ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಖಾತೆಗೆ ಬಂದಿಲ್ಲ ಎಂದು ಫಲಾನುಭವಿಗಳು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರು. ಆದರೆ ಸರ್ವರ್ ಸಮಸ್ಯೆ, ತಾಂತ್ರಿಕ ಸಮಸ್ಯೆ ಎಂದೆಲ್ಲಾ ಏನೇನೋ ನೆಪಗಳು ಸಚಿವರಿಂದಲೂ ಬರುತ್ತಲೇ ಇತ್ತು. ಇತ್ತೀಚೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಸರಾ ಹಬ್ಬದ ಸಂದರ್ಭದಲ್ಲಿ ಎರಡು ದಿನಗಳಾಗಿ ಜೂನ್ ಮತ್ತು ಜುಲೈ ತಿಂಗಳ ಹಣ ಜಮೆ ಮಾಡುವುದಾಗಿ ಭರವಸೆ ನೀಡಿದ್ದರು.

ಇದೇ ತಿಂಗಳು ಅಕ್ಟೋಬರ್ 7 ಮತ್ತು 9 ರಂದು ಹಣ ಬರಲಿದೆ ಎಂದು ಸಚಿವರು ಭರವಸೆ ನೀಡಿದ್ದರು. ಅದರಂತೆ ಫಲಾನುಭವಿಗಳಿಗೆ ತಮ್ಮ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ಕೇವಲ ಜೂನ್ ತಿಂಗಳ ಹಣ ಮಾತ್ರ ಜಮೆ ಆಗಿದೆ. ಜುಲೈ ತಿಂಗಳ ಹಣ ಹೇಳಿದಂತೆ ಬಂದೇ ಇಲ್ಲ. ಇದರಿಂದ ಮಹಿಳೆಯರು ಆಕ್ರೋಶಗೊಂಡಿದ್ದಾರೆ.

ಕೆಲವರ ಖಾತೆಗೆ ಹಣ ಜಮೆ ಆಗಿದೆ. ಕೆಲವರಿಗೆ ಇನ್ನೂ ಆಗಿಲ್ಲ. ಹಣ ಜಮೆ ಆಗಿದೆಯಾ ಎಂದು ಬ್ಯಾಂಕ್ ಗೆ ಅಲೆದು ಮಹಿಳೆಯರು ಸುಸ್ತಾಗಿದ್ದಾರೆ. ಆದರೆ ಎಲ್ಲರ ಖಾತೆಗೆ ಹಣ ಹಾಕಲು ನಾವು ಬಿಲ್ ಕ್ಲಿಯರೆನ್ಸ್ ಮಾಡಿದ್ದೇವೆ. ತಾಂತ್ರಿಕ ಸಮಸ್ಯೆಯಿಂದ ನಿಧಾನವಾಗಿರಬಹುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮಜಾಯಿಷಿ ನೀಡಿದ್ದಾರೆ. ಆದರೆ ಇದು ಮಹಿಳೆಯರು ಸಿಟ್ಟು ತಣ್ಣಗಾಗಿಸಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ